Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಭಾರತದಲ್ಲಿ ರಾಜಕೀಯ ತಾರತಮ್ಯ ಕುರಿತು...

ಭಾರತದಲ್ಲಿ ರಾಜಕೀಯ ತಾರತಮ್ಯ ಕುರಿತು ವಿಚಾರಣೆ ಅನಗತ್ಯ: ಮೆಟಾ

ತನಿಖೆಯ ಪರ ಮತ ಚಲಾಯಿಸಲು ಶೇರುದಾರರಿಗೆ ಹೋರಾಟಗಾರರ ಆಗ್ರಹ

30 May 2023 6:12 PM IST
share
ಭಾರತದಲ್ಲಿ ರಾಜಕೀಯ ತಾರತಮ್ಯ ಕುರಿತು ವಿಚಾರಣೆ ಅನಗತ್ಯ: ಮೆಟಾ
ತನಿಖೆಯ ಪರ ಮತ ಚಲಾಯಿಸಲು ಶೇರುದಾರರಿಗೆ ಹೋರಾಟಗಾರರ ಆಗ್ರಹ

ಹೊಸದಿಲ್ಲಿ: ಕಂಪನಿಯ ಭಾರತೀಯ ಕಾರ್ಯಾಚರಣೆಗಳಲ್ಲಿ ರಾಜಕೀಯ ತಾರತಮ್ಯವನ್ನು ನಿವಾರಿಸಲು ತಾನು ವಿಫಲಗೊಂಡಿದ್ದೇನೆ ಎಂಬ ಆರೋಪಗಳ ಕುರಿತು ವಿಚಾರಣೆಯ ವಿರುದ್ಧ ಮತ ಚಲಾಯಿಸುವಂತೆ ಫೇಸ್ಬುಕ್ ನ ಮಾತೃಸಂಸ್ಥೆ ಮೆಟಾದ ನಿರ್ದೇಶಕರ ಮಂಡಳಿಯು ತನ್ನ ಶೇರುದಾರರಿಗೆ ಶಿಫಾರಸು ಮಾಡಿದೆ.

ಬಳಕೆದಾರ ಗುಂಪು ‘ಎಕೋ’ ಈ ವಿಚಾರಣೆಯನ್ನು ಪ್ರಸ್ತಾವಿಸಿದ್ದು, ಮೇ 31ರಂದು ನಡೆಯಲಿರುವ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮೆಟಾ ಶೇರುದಾರರು ಈ ಬಗ್ಗೆ ಮತಗಳನ್ನು ಚಲಾಯಿಸಲಿದ್ದಾರೆ.

ಫೇಸ್ ಬುಕ್, ಇನ್ಸ್ಟಾಗ್ರಾಂ ಮತ್ತು ವಾಟ್ಸ್ಆ್ಯಪ್ ಸೇರಿದಂತೆ ಮೆಟಾದ ಪ್ಲ್ಯಾಟ್ಫಾರ್ಮ್ ಗಳ ಬಳಕೆದಾರರಲ್ಲಿ ಅದರ ವಿರುದ್ಧದ ಆರೋಪಗಳ ಕುರಿತು ಜಾಗ್ರತಿಯನ್ನು ಹೆಚ್ಚಿಸಲು ಮತ್ತು ತನ್ನ ಪ್ರಸ್ತಾವದ ಪರವಾಗಿ ಮತ ಚಲಾಯಿಸುವಂತೆ ಮೆಟಾ ಶೇರುದಾರರನ್ನು ಆಗ್ರಹಿಸಲು ಎಕೋ ಅಭಿಯಾನವೊಂದನ್ನು ಆರಂಭಿಸಿದೆ. ಇಂಡಿಯಾ ಸಿವಿಲ್ ವಾಚ್ ಇಂಟರ್ನ್ಯಾಷನಲ್ (ಐಸಿಡಬ್ಲ್ಯುಐ) ಮತ್ತು ಇಂಟರ್ನೆಟ್ ಫ್ರೀಡಂ ಫೌಂಡೇಷನ್ (ಐಎಫ್ಎಫ್) ಈ ಅಭಿಯಾನದಲ್ಲಿ ಕೈಜೋಡಿಸಿವೆ. ಎಕೋದ ಪ್ರಸ್ತಾವವನ್ನು ಅಧಿಕೃತವಾಗಿ ‘ಪ್ರಸ್ತಾವ 7’ ಎಂದು ಹೆಸರಿಸಲಾಗಿದೆ.

ದ್ವೇಷ ಭಾಷಣಗಳ ಪ್ರಸಾರ,ಅಪಾಯಗಳು ಮತ್ತು ರಾಜಕೀಯ ಪಕ್ಷಪಾತವನ್ನು ಬಗೆಹರಿಸುವಲ್ಲಿ ವೈಫಲ್ಯ, ಸಮರ್ಪಕ ಕಂಟೆಂಟ್ ನಿಯಂತ್ರಣ ಮತ್ತು ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆಯ ಕೊರತೆಗಾಗಿ ಫೇಸ್ಬುಕ್ ವಿರುದ್ಧ ಆರೋಪಗಳನ್ನು ಪ್ರಸ್ತಾವ 7 ಎತ್ತಿ ತೋರಿಸಿದೆ ಎಂದು ಐಎಫ್ಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಬಿಜೆಪಿ ರಾಜಕಾರಣಿಗಳು ಮತ್ತು ಹಿಂದು ರಾಷ್ಟ್ರವಾದಿ ಘಟಕಗಳು ಮಾಡಿದ್ದ ಪೋಸ್ಟ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಭಾರತದಲ್ಲಿಯ ಹಿರಿಯ ಫೇಸ್ಬುಕ್ ಅಧಿಕಾರಿ ನಿರಾಕರಿಸಿದ್ದಾರೆ. ಹಾಗೆ ಮಾಡುವುದರಿಂದ ಆಡಳಿತಾರೂಢ ಪಕ್ಷದೊಂದಿಗೆ ತನ್ನ ಕಂಪನಿಯ ಸಂಬಂಧ ಹಾಳಾಗುತ್ತದೆ ಎಂದು ಅವರು ಆತಂಕಗೊಂಡಿದ್ದಾರೆ ಎಂಬ ವರದಿಗಳಿಗೆ ಈ ಆರೋಪಗಳು ಸಂಬಂಧಿಸಿವೆ.
ತನ್ನ ಭಾರತೀಯ ಕಾರ್ಯಾಚರಣೆಗಳ ಕುರಿತು ಮೆಟಾ ಬಿಡುಗಡೆಗೊಳಿಸಿರುವ ಮಾನವ ಹಕ್ಕುಗಳ ಪ್ರಭಾವ ವರದಿಯು ಪಾರದರ್ಶಕವಾಗಿಲ್ಲ ಎಂದೂ ಎಕೋ ಟೀಕಿಸಿದೆ.

share
Next Story
X