ಗೋಕರ್ಣ ರೈಲ್ವೆ ನಿಲ್ದಾಣದಲ್ಲಿ ಜೂನ್ ಒಂದರಿಂದ ಪಿಆರ್‌ಎಸ್ ವ್ಯವಸ್ಥೆ

ಉಡುಪಿ, ಮೇ 30: ಕೊಂಕಣ ರೈಲ್ವೆ ಮಾರ್ಗದ ಗೋಕರ್ಣ ರೈಲು ನಿಲ್ದಾಣದಲ್ಲಿ ಜೂನ್ ಒಂದರಿಂದ ಪ್ರಯಾಣಿಕರ ಟಿಕೇಟ್ ಕಾದಿರಿಸುವ ವ್ಯವಸ್ಥೆ (ಪಿಆರ್‌ಎಸ್) ಜಾರಿಗೊಳ್ಳಲಿದೆ.
ಪ್ರಯಾಣಿಕರು ಪ್ರತಿದಿನ ಬೆಳಗ್ಗೆ 8:00ರಿಂದ ಅಪರಾಹ್ನ 2:00ಗಂಟೆಯವ ರೆಗೆ ಗೋಕರ್ಣ ಟಿಕೇಟ್ ಕೌಂಟರಿನಲ್ಲಿ ಟಿಕೇಟ್‌ಗಳನ್ನು ಕಾದಿರಿಸಲು ಅವಕಾಶವಿದೆ.
ಕೊಂಕಣ ರೈಲ್ವೆ ಕಾರ್ಪೋರೇಷನ್ ಕೊಂಕಣ ರೈಲ್ವೆ ಮಾರ್ಗದಲ್ಲಿ ಒಟ್ಟು 18 ರೈಲು ನಿಲ್ದಾಣಗಳಲ್ಲಿ ಟಿಕೇಟ್ ಕಾದಿರಿಸುವ ವ್ಯವಸ್ಥೆಯನ್ನು ಅನುಷ್ಠಾನ ಗೊಳಿಸಿದೆ. ಇವುಗಳಲ್ಲಿ ಸುರತ್ಕಲ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಕುಮಟಾ ಹಾಗೂ ಕಾರವಾರ ನಿಲ್ದಾಣಗಳು ಕರ್ನಾಟಕ ಕರಾವಳಿ ವ್ಯಾಪ್ತಿಗೆ ಬರುತ್ತವೆ. ಇದೀಗ ಗೋಕರ್ಣ ಸಹ ಇದೇ ಸಾಲಿಗೆ ಸೇರಲಿದೆ.
ಇದರೊಂದಿಗೆ ಐದು ಪೋಸ್ಟ್‌ಆಫೀಸ್‌ಗಳಲ್ಲೂ ಪಿಆರ್‌ಎಸ್ ವ್ಯವಸ್ಥೆ ಇದ್ದು, ಇವುಗಳು ಕನಕೋನಾ, ರತ್ನಗಿರಿ, ಲಂಜಾ, ಸಂಗಮೇಶ್ವರ ಹಾಗೂ ಮಹಾಡ್ ಎಲ್ಲವೂ ಮಹಾರಾಷ್ಟ್ರದಲ್ಲಿವೆ.
Next Story