ಒಲಿಂಪಿಕ್ ಪದಕಗಳನ್ನು ಗಂಗಾನದಿಗೆ ಎಸೆಯುವ ನಿರ್ಧಾರ ಮುಂದೂಡಿದ ಕುಸ್ತಿಪಟುಗಳು

ಹರಿದ್ವಾರ: ಕುಸ್ತಿ ಅಸೋಶಿಯೇಶನ್ ನ ಅಧ್ಯಕ್ಷ ಬ್ರಿಜ್‌ಭೂಷಣ್ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಕುಸ್ತಿ ಪಟುಗಳು ತಮ್ಮ ಒಲಿಂಪಿಕ್ ಪದಕಗಳನ್ನು ಹರಿದ್ವಾರದ ಗಂಗಾ ನದಿಗೆ ಎಸೆಯುವ ನಿರ್ಧಾರವನ್ನು ಮುಂದೂಡಿದ್ದಾರೆ ಎಂದು ತಿಳಿದು ಬಂದಿದೆ. ರೈತ ಮುಖಂಡರೋರ್ವರು ಅವರ ಮನವೊಲಿಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ.
ಒಲಿಂಪಿಕ್ ಪದಕ ವಿಜೇತರಾಗಿರುವ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಹಾಗೂ ಸಂಗೀತಾ ಫೋಗಟ್ ತಮ್ಮ ಮೆಡಲ್‌ಗಳನ್ನು ನದಿಗೆಸೆಯಲು ಸಿದ್ಧರಾಗಿದ್ದು ಬಳಿಕ ಇದೀಗ ಸರಕಾರಕ್ಕೆ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲು ಐದು ದಿನಗಳ ಗಡುವನ್ನು ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.
Next Story