ಎಂಎಲ್‌ಸಿ ಭಂಡಾರಿ ಸೂಚನೆ: ಉಳ್ಳೂರು ಗ್ರಾಪಂಗೆ ವಾರಾಹಿ ನೀರು

ಉಡುಪಿ: ಕುಂದಾಪುರ ತಾಲೂಕಿನ ಉಳ್ಳೂರು ಗ್ರಾಪಂ ವ್ಯಾಪ್ತಿಯ ಹೊಳೆಗೆ ವಾರಾಹಿ ಅಣೆಕಟ್ಟಿನಿಂದ ನೀರು ಬಿಡದ ಕಾರಣ ಹೊಳೆ ಬತ್ತಿ ಹೋಗಿದ್ದು ಇದರಿಂದ ಕೃಷಿಕರಿಗೆ ಹಾಗೂ ಪ್ರಾಣಿಗಳಿಗೆ ನೀರಿಲ್ಲದೇ ತೀವ್ರ ತೊಂದರೆಯಾಗಿತ್ತು.
ಕೊನೆಗೆ ಗ್ರಾಮಸ್ಥರು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರ ಗಮನಕ್ಕೆ ವಿಷಯ ತಂದಾಗ ಅವರು ಕೂಡಲೇ ವಾರಾಹಿ ಯೋಜನೆಯ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ವಾರಾಹಿ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುವಂತೆ ಸೂಚಿಸಿದಂತೆ ಸೋಮವಾರ ಅಧಿಕಾರಿಗಳು ವಾರಾಹಿ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾರಾಹಿ ನದಿ ಪ್ರದೇಶ ವ್ಯಾಪ್ತಿಯ ಉಳ್ಳೂರು ಗ್ರಾಪಂಗೆ ಸಂಬಂಧಿಸಿದ ಬಂಟೆಕೋಡು, ಅಳೆನೀರು ಕೊಡ್ಲು, ಹೊಸಬಾಳು, ನಿಡಗೋಡು, ಕಳಿನಜಡ್ಡು ಹಾಗೂ ಇತರ ಭಾಗದ ಹೊಳೆ, ವಾರಾಹಿ ನೀರು ಬಿಡದ ಕಾರಣ ಬತ್ತಿ ಹೋಗಿತ್ತು ಎಂದು ಪ್ರಕಟಣೆ ತಿಳಿಸಿದೆ.
Next Story