ಉಡುಪಿ: ಸಿಐಟಿಯು 53ನೇ ಸಂಸ್ಥಾಪನಾ ದಿನಾಚರಣೆ
ಉಡುಪಿ, ಮೇ 30: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಇದರ 53ನೇ ಸಂಸ್ಥಾಪನಾ ದಿನಾಚರಣೆಯನ್ನು ದೇಶಾದ್ಯಂತ ಆಚರಣೆ ಮಾಡುತ್ತಿದ್ದು, ಉಡುಪಿ ಜಿಲ್ಲೆಯ ಎಲ್ಲಾ ಸಿಐಟಿಯು ಕಛೇರಿಯಲ್ಲಿ ಹಾಗೂ ಎಲ್ಲಾ ಕಾರ್ಖಾನೆ, ಕೆಲಸ ಮಾಡುವ ಸ್ಥಳಗಳಲ್ಲೂ ಇಂದು ಧ್ವಜಾರೋಹಣದ ಮೂಲಕ ಈ ದಿನಾಚರಣೆ ಯನ್ನು ಆಚರಿಸಲಾಯಿತು.
ಉಡುಪಿಯಲ್ಲಿ ಸಿಐಟಿಯು ಉಡುಪಿ ಸಂಚಾಲನ ಸಮಿತಿ ನೇತೃತ್ವದಲ್ಲಿ ಧ್ವಜಾರೋಹಣ ನಡೆಸಲಾಯಿತು ಹಿರಿಯ ಮುಖಂಡ, ಚಿಂತಕರಾದ ಅದಮಾರು ಶ್ರೀಪತಿ ಆಚಾರ್ಯರು ಧ್ವಜಾರೋಹಣ ನೆರವೇರಿಸಿದರು.
ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಖಜಾಂಚಿ ಶಶಿಧರ ಗೊಲ್ಲ, ಸಿಐಟಿಯು ಉಡುಪಿ ಸಂಚಾಲಕ ಕವಿರಾಜ್ ಎಸ್, ಮುಖಂಡರಾದ ಉಮೇಶ್ ಕುಂದರ್, ನಳಿನಿ ಎಸ್, ಮೋಹನ್, ರಮೇಶ್, ವಿದ್ಯಾರಾಜ್, ಸಾರಿಕ, ಶಾರದ,ಉಡುಪಿ ಜಿಲ್ಲಾ ಕಟ್ಟಡ ಸಂಘದ ಖಂಜಾಂಚಿ ಗಣೇಶ್ ನಾಯ್ಕ, ಉಡುಪಿ ಜಿಲ್ಲಾ ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಸರೋಜ ಉಪಸ್ಥಿತರಿದ್ದರು.
ಬ್ರಹ್ಮಾವರ: ಬ್ರಹ್ಮಾವರದಲ್ಲಿ ಸಿಐಟಿಯು ಸಂಸ್ಥಾಪನಾ ದಿನಾಚರಣೆ ನಡೆಯಿತು ಸಿಐಟಿಯು ಬ್ರಹ್ಮಾವರ ಸಂಚಾಲಕರಾದ ಸುಭಾಶ್ ನಾಯಕ್, ಮುರಳಿ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಖಂಜಾಂಚಿ ಶಶಿಧರ ಗೊಲ್ಲ ಮುಖಂಡರಾದ ರಮೇಶ್ ಪೂಜಾರಿ ಉಪಸ್ಥಿತರಿದ್ದರು.
ಕಾರ್ಕಳ: ಕಾರ್ಕಳ ಕಚೇರಿಯಲ್ಲೂ ಸಿಐಟಿಯು 53ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಸಿಐಟಿಯು ಕಾರ್ಕಳ ತಾಲೂಕು ಸಂಚಾಲಕರಾದ ಸುನೀತಾ ಶೆಟ್ಟಿ, ಕಾರ್ಕಳ ಕಟ್ಟಡ ಸಂಘದ ಮುಖಂಡರಾದ ಸತೀಶ್, ಚಂದ್ರಶೇಖರ್, ಪುಷ್ಪ ಉಪಸ್ಥಿತರಿದ್ದರು.