ಆದ್ಯಪಾಡಿ: ಗಾಂಜಾ ಸಹಿತ ಇಬ್ಬರ ಸೆರೆ

ಮಂಗಳೂರು, ಮೇ 30: ನಗರ ಹೊರವಲಯದ ಮೂಡುಶೆಡ್ಡೆ ಗ್ರಾಮದ ಅದ್ಯಪಾಡಿ ಫಲ್ಗುಣಿ ನದಿ ತೀರದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಬಂಧಿಸಿ ಅವರಿಂದ 10.125 ಕಿ.ಗ್ರಾಂ.ತೂಕದ ಗಾಂಜಾವನ್ನು ಕಾವೂರು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರಾಮನಪಳ್ಳಿಯ ಸಾಹೀಲ್ (19) ಹಾಗೂ ಸೋಮೇಶ್ವರದ ಮನ್ಸೂರ್ (21) ಬಂಧಿತ ಆರೋಪಿಗಳು. ಇವರು ಗಾಂಜಾ ಮಾರಾಟಕ್ಕೆ ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ. ವಶಪಡಿಸಿಕೊಂಡ ಗಾಂಜಾದ ಮೌಲ್ಯ 3 ಲಕ್ಷ ರೂ. ಆಗಿದೆ ಎಂದು ಅಂದಾಜಿಸಲಾಗಿದೆ.
ನಗರ ಉತ್ತರ ಉಪವಿಭಾಗದ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಾವೂರು ಇನ್‌ಸ್ಪೆಕ್ಟರ್ ಗುರುರಾಜ್, ಎಸ್ಸೈ ರಘುನಾಯಕ್ ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.
Next Story