ನ್ಯಾಯಾಲಯಕ್ಕೆ ಜಾಮೀನು ಬಾಂಡ್ ಸಲ್ಲಿಸಿದ ಇಮ್ರಾನ್

ಲಾಹೋರ್, ಮೇ 30: ತನ್ನ ವಿರುದ್ಧ ದಾಖಲಾಗಿರುವ 4 ಪ್ರಕರಣಗಳಿಗೆ ಸಂಬಂಧಿಸಿ ಲಾಹೋರ್ ನಲ್ಲಿನ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದ ಎದುರು ಮಂಗಳವಾರ ಹಾಜರಾಗಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜಾಮೀನು ಬಾಂಡ್ ಗಳನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಜೂನ್ 2ರವರೆಗೆ ಇಮ್ರಾನ್ ನನ್ನು ಬಂಧಿಸಬಾರದು ಎಂದು ಭಯೋತ್ಪಾದನೆ ನಿಗ್ರಹ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶದ ಪ್ರಕಾರ ಇಮ್ರಾನ್ ತಲಾ 1 ಲಕ್ಷ ಪಾಕ್ ರೂಪಾಯಿಗಳ ಜಾಮೀನು ಬಾಂಡ್ ಅನ್ನು ಒದಗಿಸಬೇಕಿತ್ತು. ಮಂಗಳವಾರ ಬಿಗಿ ಭದ್ರತೆಯಲ್ಲಿ ನ್ಯಾಯಾಲಯದಲ್ಲಿ ಇಮ್ರಾನ್ ಹಾಜರಾದಾಗ ಅಲ್ಲಿದ್ದ ಕೆಲವು ವಕೀಲರು ಇಮ್ರಾನ್ ಪರ ಘೋಷಣೆ ಕೂಗಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Next Story