ಭಾರತೀಯ ಜೈನ್ ಮಿಲನ್‌ನ ಪದಾಧಿಕಾರಿಗಳ ಪದಗ್ರಹಣ

ಮಂಗಳೂರು: ಭಾರತೀಯ ಜೈನ್ ಮಿಲನ್ ಮಂಗಳೂರು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ನಗರದ ಎಸ್‌ಡಿಎಂ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಭಾರತೀಯ ಜೈನ್ ಮಿಲನ್‌ನ ರಾಷ್ಟೀಯ ರಾಷ್ಟ್ರೀಯ ಅಧ್ಯಕ್ಷ ಡಿ.ಸುರೇಂದ್ರ ಕುಮಾರ್ ಜೈನ್ ಸಭೆಯನ್ನು ಉದ್ಘಾಟಿಸಿದರು. ನಿಕಟಪೂರ್ವ ವಲಯಾಧ್ಯಕ್ಷ ಪುಷ್ಪರಾಜ್ ಜೈನ್, ಉಪಾಧ್ಯಕ್ಷ ಸುದರ್ಶನ್ ಜೈನ್, ವಲಯ ನಿರ್ದೇಶಕ ಸುಕುಮಾರ್ ಬಳ್ಳಾಲ್ ಉಪಸ್ಥಿತರಿದ್ದರು.
ಮಾಜಿ ವಲಯಾಧ್ಯಕ್ಷ ಡಾ. ಎಂ. ವಿದ್ಯಾಧರ್ ಶೆಟ್ಟಿ, ಮಂಗಳೂರು ಜೈನ್ ಮಿಲನ್ ಸ್ಥಾಪಕ ಅಧ್ಯಕ್ಷ ಸುರೇಶ್ ಬಳ್ಳಾಲ್, ಡಾ.ಮಾಲತಿ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ನೂತನ ಅಧ್ಯಕ್ಷರಾಗಿ ರತ್ನಾಕರ್ ಜೈನ್, ಉಪಾಧ್ಯಕ್ಷರಾಗಿ ನಿರ್ಮಲ್ ಕುಮಾರ್ ಮತ್ತು ಮಹಾವೀರ ಪ್ರಸಾದ್, ಕಾರ್ಯರ್ದಯಾಗಿ ವೈಶಾಲಿ ಪಡಿವಾಳ್, ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ಪಿ. ಜೈನ್, ಸನತ್ ಕುಮಾರ್ ಜೈನ್, ಕೋಶಾಧಿಕಾರಿಯಾಗಿ ಪ್ರಿಯಾ ಸುದೇಶ್ ಜೈನ್ ಆಯ್ಕೆಗೊಂಡರು.
ನಿಕಟಪೂರ್ವ ಅಧ್ಯಕ್ಷ ಪ್ರಮೋದ್ ಕುಮಾರ್ ಸ್ವಾಗತಿಸಿದರು. ರತ್ನಾಕರ ಜೈನ್ ವಂದಿಸಿದರು. ರಾಜೇಶ್ ಎಂ. ಮತ್ತು ಪ್ರಿಯಾ ಸುದೇಶ್ ಜೈನ್ ಕಾರ್ಯಕ್ರಮ ನಿರೂಪಿಸಿದರು.