ಮಂಗಳೂರು: ಸಿಐಟಿಯು ಸಂಘಟನೆಗೆ 53 ವರ್ಷಗಳ ಸಂಭ್ರಮ

ಮಂಗಳೂರು, ಮೇ 30: ಐಕ್ಯತೆ ಮತ್ತು ಹೋರಾಟದ ನಿನಾದದೊಂದಿಗೆ, ತ್ಯಾಗ ಬಲಿದಾನದ ಪರಂಪರೆ ಯೊಂದಿಗೆ ಕಾರ್ಮಿಕ ಚಳುವಳಿಯಲ್ಲಿ ಮುಂಚೂಣಿಯಲ್ಲಿರುವ ಸಿಐಟಿಯು ಸಂಘಟನೆಗೆ 53 ವರ್ಷಗಳ ಸಂಭ್ರಮದ ಹಿನ್ನಲೆಯಲ್ಲಿ ಮಂಗಳವಾರ ಬೋಳಾರದಲ್ಲಿ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣದ ಮೂಲಕ ಸಿಐಟಿಯು ಸಂಸ್ಥಾಪನಾ ದಿನ ಆಚರಿಸಲಾಯಿತು.
ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಧ್ವಜಾರೋಹಣಗೈದು ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಭಾರತಿ ಬೋಳಾರ, ನಾಗೇಶ್ ಕೋಟ್ಯಾನ್, ವಿದ್ಯಾರ್ಥಿ ನಾಯಕಿ ಮಾಧುರಿ ಬೋಳಾರ ಉಪಸ್ಥಿತರಿದ್ದರು.
ಜಿಲ್ಲೆಯ ತೊಕ್ಕೊಟ್ಟು, ಕುತ್ತಾರ್, ಹರೇಕಳ, ಜಪ್ಪಿನಮೊಗರು, ಬಜಾಲ್ ಪಕ್ಕಲಡ್ಕ, ಉರ್ವಸ್ಟೋರ್, ಬಂದರು ಬೈತದಕ್ಕೆ, ಬೆಂಗರೆ, ಕೈಕಂಬ,ಕುಪ್ಪೆಪದವು,ವಾಮಂಜೂರು,ಮೂಡುಬಿದಿರೆ,ಬೆಳ್ತಂಗಡಿ,ಸುಳ್ಯ,ಬಂಟ್ವಾಳದಲ್ಲಿ ಧ್ವಜಾರೋಹಣ ನಡೆಸಲಾಯಿತು.
Next Story