ಕುಸ್ತಿಪಟುಗಳ ಪ್ರತಿಭಟನೆ: ನರೇಂದ್ರ ಮೋದಿ ಸರ್ಕಾರದ ವರ್ಚಸ್ಸು ಕುಗ್ಗಿಸುವ ಪ್ರಯತ್ನ ಎಂದ ಸಿ.ಟಿ. ರವಿ

ಬೆಂಗಳೂರು: ಕುಸ್ತಿಪಟುಗಳ ಪ್ರತಿಭಟನೆಯ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಪ್ರತಿಕ್ರಿಯೆ ನೀಡಿದ್ದು, ಪ್ರತಿಭಟನೆ ಹಿಂದೆ ಕಾಂಗ್ರೆಸ್ ಇದೆ ಎಂದು ಟ್ವೀಟ್ ಮಾಡಿದ್ದಾರೆ.
'ಲೋಕಸಭೆ ಚುನಾವಣೆಯಲ್ಲಿ ಮತ್ತೊಂದು ಹೀನಾಯ ಸೋಲನ್ನು ದಿಟ್ಟಿಸಿ ನೋಡುತ್ತಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರತಿಷ್ಠೆಯನ್ನು ಹಾಳು ಮಾಡಲು ಕುಸ್ತಿಪಟುಗಳನ್ನು ಬಳಸಿಕೊಳ್ಳುತ್ತಿದೆ. "ತುಕ್ಡೆ ತುಕ್ಡೆ ಗ್ಯಾಂಗ್" ನಾಯಕನಾಗಿ ತನ್ನನ್ನು ತಾನು ಕುಗ್ಗಿಸಿಕೊಂಡ ಪಕ್ಷಕ್ಕೆ ಭಾರತೀಯರು ತಕ್ಕ ಪಾಠ ಕಲಿಸುತ್ತಾರೆ.' ಎಂದು ಸಿಟಿ ರವಿ ಟ್ವೀಟ್ ಮಾಡಿದ್ದಾರೆ.
Staring at another massive defeat in Lok Sabha elections, a DeMonetized CONgress is using Wrestlers to tarnish the image of PM Shri @narendramodi Government.
— C T Ravi ಸಿ ಟಿ ರವಿ (@CTRavi_BJP) May 31, 2023
Bharatiyas will teach a befitting lesson to the party which has reduced itself as the leader of the "Tukde Tukde Gang".
Next Story