ಉಚಿತ ಅಕ್ಕಿ ನೀಡಿದರೆ ಇತರ ಖರ್ಚಿಗಾಗಿ ಜನರು ದುಡಿಯುತ್ತಾರೆ: ನಟ ಡಾಲಿ ಧನಂಜಯ

ಮಂಡ್ಯ ; ಉಚಿತ ಅಕ್ಕಿ ನೀಡಿದ್ರೆ ಜನ ಸೋಮಾರಿ ಆಗ್ತಾರೆ ಅನ್ನೋದು ಸುಳ್ಳು ಎಂದು ನಟ ಡಾಲಿ ಧನಂಜಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಪಕ್ಷ ಪರ, ವಿರೋಧವಾಗಿ ನಾನು ಮಾತಡಲ್ಲ. ಸುಮ್ಮನೆ ನನಗೆ ರಾಜಕೀಯ ಕೇಳಿ ತಗಲಾಕಿಸುತ್ತೀರಾ ಎಂದು ಪ್ರಶ್ನಿಸಿದರು.
ಸಾಮಾನ್ಯ ಮನುಷ್ಯನಾಗಿ ನಾನು ಹೇಳ್ತೀನಿ. ತಿಂಗಳಿಗೆ ಆದಾಯಕ್ಕಿಂತ ಕಡಿಮೆ ಇರೋರಿಗೆ ಹಸಿವು ನೀಗಿಸಲು ಅಕ್ಕಿ ಕೊಟ್ಟರೆ ತಪ್ಪಾಗಿ ಕಾಣಲ್ಲ. ಅದರಿಂದ ಜನ ಸೊಂಬೇರಿ ಆಗ್ತಾರೆ ಅಂದ್ರೆ ತಪ್ಪು.
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದೆ. ಒಂದು ಕ್ಷೇತ್ರದಲ್ಲಿ ಎಲ್ಲವೂ ಸರಿ ಇರಲ್ಲ. ನ್ಯೂನ್ಯತೆಗಳನ್ನು ಸರಿ ಮಾಡಿಕೊಂಡು ಉತ್ತಮ ಶಿಕ್ಷಣ ಕೊಡಬೇಕು ಎಂದು ಆಗ್ರಹಿಸಿದರು.
ತಿಂಗಳಿಗೆ 10 ಕೆಜಿ ಅಕ್ಕಿ ಕೊಟ್ಟರೆ ಅಡುಗೆ ಮಾಡಿಕೊಂಡು ಊಟ ಮಾಡಿಕೊಂಡು ಮನೆಯಲ್ಲಿ ಇರೋಕೆ ಆಗಲ್ಲ. ಅಕ್ಕಿ ಕೊಟ್ಟರೆ ಹಸಿವನ್ನು ನೀಗಿಸುತ್ತೆ. ಇತರೆ ಖರ್ಚಿಗೆ ಜನ ದುಡಿಯುತ್ತಾರೆ. ಇಲ್ಲದವರಿಗೆ ಸಹಾಯ ಮಾಡುವುದು ತಪ್ಪಲ್ಲ ಎಂದರು.
Next Story