ಡಿಎಲ್‌ಇಡಿ, ಡಿಪಿಇಡಿ ಕೋರ್ಸಿಗೆ ಅರ್ಜಿ ಆಹ್ವಾನ

ಉಡುಪಿ, ಮೇ 31: ಪ್ರಸಕ್ತ ಸಾಲಿನಲ್ಲಿ ಡಿಇಎಲ್‌ಇಡಿ ಮತ್ತು ಡಿಪಿಇಡಿ ಕೋರ್ಸಿನ ವ್ಯಾಸಂಗಕ್ಕಾಗಿ ದಾಖಲಾತಿ ಪಡೆಯಲು ಆಸಕ್ತಿ ಹೊಂದಿದ ಅಭ್ಯರ್ಥಿಗಳು ಎಸೆಸೆಲ್ಸಿ, ಪಿಯುಸಿ ಅಂಕಪಟ್ಟಿ, ವ್ಯಾಸಂಗ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಸೈಜ್ ಫೋಟೋ ಇತ್ಯಾದಿ ಎಲ್ಲಾ ಮೂಲ ದಾಖಲೆಗಳನ್ನು ಮತ್ತು ಇವುಗಳ ಒಂದು ಸೆಟ್ ಜೆರಾಕ್ಸ್ ಪ್ರತಿಯೊಂದಿಗೆ ಡಯಟ್ ಕಚೇರಿ (ಟ್ರೈನಿಂಗ್ ಶಾಲೆ) ಸಿಂಡಿಕೇಟ್ ಬ್ಯಾಂಕ್ ಟವರ್ ಹತ್ತಿರ, ಡಯಾನ ಸರ್ಕಲ್, ಉಡುಪಿ ಇಲ್ಲಿ ಅಭ್ಯರ್ಥಿಗಳು ಖುದ್ದಾಗಿ ಬಂದು ನಿಗದಿತನ ಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿದ ಅರ್ಜಿಯನ್ನು ಜೂನ್ 26ರ ಸಂಜೆ 3 ಗಂಟೆಯೊಳಗೆ ಸಲ್ಲಿಸಬೇಕೆಂದು ಉಡುಪಿ ಡಯಟ್‌ನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನೊಡಲ್ ಅಧಿಕಾರಿ ಗೀತಾ ಶಿರಾಲಿ (9481269274) ಇವರನ್ನು ಸಂಪರ್ಕಿಸಬಹುದು.
Next Story