ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ

ಉಡುಪಿ, ಮೇ 31: ಉಡುಪಿಯಲ್ಲಿ ಒಂದು ಗ್ರಾಂ ಗೋಲ್ಡ್ ಅಂಗಡಿ ಯನ್ನು ನಡೆಸುತ್ತಿರುವ ರಮೇಶ್ ಆಚಾರ್ಯ (39) ಎಂಬವರು ಸಾಲ ಅಥವಾ ಇನ್ಯಾವುದೋ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಮಂಗಳವಾರ ಅಪರಾಹ್ನ 1:30ರಿಂದ 3:30ರ ನಡುವಿನ ಅವಧಿಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ವಿಪರೀತ ಮದ್ಯ ಸೇವೆಯ ಚಟ ಹೊಂದಿದ್ದ ಗಾರೆ ಮಸ್ತ್ರಿ ಕೆಲಸ ಮಾಡುತಿದ್ದ ಸುಭಾಷ (52) ಎಂಬವರು, ಕಳೆದ ಮೂರು ವರ್ಷಗಳಿಂದ ಲೀವರ್ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತಿದ್ದು, ಇದರಿಂದ ಮಾನಸಿಕವಾಗಿ ನೊಂದು ಇಂದು ಕೋಟೇಶ್ವರ ಗ್ರಾಮದ ಮಾರ್ಕೋಡು ಕೋಣಿ ರಸ್ತೆಯ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬೆಳಗ್ಗೆ 9:30ರ ಸುಮಾರಿಗೆ ಮನೆಯ ಪಕ್ಕದ ಹಾಡಿಯಲ್ಲಿರುವ ಗೇರುಮರದ ಕೊಂಬೆಗೆ ಹಗ್ಗ ಕಟ್ಟಿ ಕುತ್ತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಂದಾಪುರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Next Story