ಮಹಾರಾಷ್ಟ್ರದ ಅಹ್ಮದ್‌ನಗರವನ್ನು ಅಹಿಲ್ಯಾನಗರ ಎಂದು ಮರು ನಾಮಕರಣ: ಮುಖ್ಯಮಂತ್ರಿ ಏಕ್ ನಾಥ್ ಶಿಂದೆ

ಅಹ್ಮದ್‌ನಗರ: ಮಹಾರಾಷ್ಟ್ರದ ಅಹ್ಮದ್‌ನಗರವನ್ನು ಅಹಿಲ್ಯಾನಗರವಾಗಿ ಮರು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಏಕ್‌ನಾಥ್ ಶಿಂದೆ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಕಟಿಸಿದ್ದಾರೆ.
ಅಹ್ಮದ್‌ನಗರ ಜಿಲ್ಲೆಯ ಚೋಂಡಿ ಗ್ರಾಮದಲ್ಲಿ ಜನಿಸಿದ ಮರಾಠಾ ಸಾಮ್ರಾಜ್ಯದ ರಾಣಿಯಾದ ಅಹಿಲ್ಯಾಬಾಯಿ ಹೋಲ್ಕರ್ ಅವರಿಗೆ ಅಹಿಲ್ಯಾನಗರವನ್ನು ಅರ್ಪಿಸಲಾಗುತ್ತಿದೆ.
18ನೇ ಶತಮಾನದ ರಾಣಿಯಾದ ಅಹಿಲ್ಯಾಬಾಯಿ ಹೋಲ್ಕರ್ ಅವರ 298ನೇ ಜನ್ಮ ದಿನದಂದು ಈ ಪ್ರಕಟಣೆಯನ್ನು ಹೊರಡಿಸಲಾಗಿದೆ. ಈ ದಿನವನ್ನು ಅಹಿಲ್ಯಾಬಾಯಿ ಹೋಲ್ಕರ್ ಜಯಂತಿ ಎಂದೂ ಆಚರಿಸಲಾಗುತ್ತಿದೆ.
ಈ ಸಮಾರಂಭದಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮಹಾರಾಷ್ಟ್ರದ ಸಚಿವ ರಾಧಾಕೃಷ್ಣ ವಿಖೆ ಹಾಗೂ ಬಿಜೆಪಿಯ ಶಾಸಕ ಗೋಪಿಚಂದ್ ಪಡಲ್ಕರ್ ಮುಂತಾದವರು ಭಾಗವಹಿಸಿದ್ದರು.
ಬಿಜೆಪಿಯು ಅಹ್ಮದ್‌ನಗರ ಜಿಲ್ಲೆಗೆ ಮರು ನಾಮಕರಣ ಮಾಡಬೇಕು ಎಂದು ಕಳೆದ ಫೆಬ್ರವರಿಯಲ್ಲಿ ಸರ್ಕಾರವು ಔರಂಗಾಬಾದ್ ಹಾಗೂ ಒಸ್ಮನಾಬಾದ್‌ಗೆ ಕ್ರಮವಾಗಿ ಛತ್ರಪತಿ ಸಂಭಾಜಿ ನಗರ ಹಾಗೂ ಧಾರಾಶಿವ ಎಂದು ಮರು ನಾಮಕರಣ ಮಾಡಿದಾಗಿನಿಂದ ಒತ್ತಾಯಿಸುತ್ತಿದೆ.