ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟುಗಳಿಗಿಂತ ಅತ್ಯಾಚಾರಿ ಸಂಸದ ಕೇಂದ್ರ ಸರ್ಕಾರಕ್ಕೆ ಮುಖ್ಯವೇ: ಕಾಂಗ್ರೆಸ್

ಬೆಂಗಳೂರು: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಸಂಘದ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಸರ್ಕಾರವೊಂದು ಇಷ್ಟೊಂದು ಸಂವೇದನಾಶೂನ್ಯವಾಗಿರುವುದನ್ನು ಈ ದೇಶ ಹಿಂದೆಂದೂ ಕಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ದೇಶದ ಕೀರ್ತಿ ಪತಾಕೆ ಹಾರಿಸಿದ ಕ್ರೀಡಾಪಟುಗಳಿಗಿಂತ ಒಬ್ಬ ಗೂಂಡಾ ಹಾಗೂ ಅತ್ಯಾಚಾರಿ ಸಂಸದನೇ ಕೇಂದ್ರ ಸರ್ಕಾರಕ್ಕೆ ಮುಖ್ಯವಾದನೇ? ಒಲಿಂಪಿಕ್ಸ್ ಪದಕ ಗೆದ್ದಾಗ ಫೋಟೋಶೂಟ್ ಮಾಡಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈಗೇಕೆ ಕ್ರೀಡಾಪಟುಗಳತ್ತ ನೋಡುತ್ತಿಲ್ಲ? ಎಂದು ಪ್ರಶ್ನಿಸಿದೆ.
ಸರ್ಕಾರವೊಂದು ಇಷ್ಟೊಂದು ಸಂವೇದನಾಶೂನ್ಯವಾಗಿರುವುದನ್ನು ಈ ದೇಶ ಹಿಂದೆಂದೂ ಕಂಡಿಲ್ಲ.
— Karnataka Congress (@INCKarnataka) June 1, 2023
ದೇಶದ ಕೀರ್ತಿ ಪತಾಕೆ ಹಾರಿಸಿದ ಕ್ರೀಡಾಪಟುಗಳಿಗಿಂತ ಒಬ್ಬ ಗೂಂಡಾ ಹಾಗೂ ಅತ್ಯಾಚಾರಿ ಸಂಸದನೇ ಕೇಂದ್ರ ಸರ್ಕಾರಕ್ಕೆ ಮುಖ್ಯವಾದನೇ?
ಒಲಂಪಿಕ್ಸ್ ಪದಕ ಗೆದ್ದಾಗ ಫೋಟೋಶೂಟ್ ಮಾಡಿಕೊಂಡಿದ್ದ @narendramodi ಅವರು ಈಗೇಕೆ ಕ್ರೀಡಾಪಟುಗಳತ್ತ ನೋಡುತ್ತಿಲ್ಲ? pic.twitter.com/s7glRu2Ikd