ಚಾಮರಾಜನಗರ: ಸಣ್ಣ ವಿಮಾನ ಪತನ

ಚಾಮರಾಜನಗರ: ಸಣ್ಣ ವಿಮಾನವೊಂದು ಪತನಗೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಮದ ಬಳಿ ಗುರುವಾರ ಮಧ್ಯಾಹ್ನ ವರದಿಯಾಗಿದೆ.
ಗುರುವಾರ ಬೆಳಗ್ಗೆ ಬೆಂಗಳೂರು ಹೆಚ್ ಎ ಎಲ್ ವಿಮಾನ ನಿಲ್ದಾಣದಿಂದ ಯು 692 ಲಘು ವಿಮಾನದಲ್ಲಿ ಪೈಲೇಟ್ ಗಳಿಬ್ಬರು ಹಾರಾಟ ನಡೆಸುವಾಗ ಮದ್ಯಾಹ್ನ 12 ಗಂಟೆಯ ಸಮಯದಲ್ಲಿ ಚಾಮರಾಜನಗರ ಕಡೆ ಬರುತ್ತಿದ್ದಂತೆ ಏರ್ ಕ್ರಾಕ್ ಆಗಿ ಚಾಮರಾಜನಗರ ತಾಲೂಕಿನ ಬೋಗಾಪುರ –ಸಪ್ಪಯ್ಯನಪುರ ನಡುವೆ ಇರುವ ಖಾಸಗಿ ಜಮೀನಿನಲ್ಲಿ ಭಾರಿ ಶಬ್ದದೊಂದಿಗೆ ಭೂಸ್ಪರ್ಶಗೊಂಡು ಛಿದ್ರಗೊಂಡಿತು.
ಅಪಘಾತ ಮುನ್ಸೂಚನೆ ದೊರೆತ ಕೂಡಲೇ ಲಘು ವಿಮಾನದಲ್ಲಿದ್ದ ಇಬ್ಬರು ಪೈಲೆಟ್ ಗಳಾದ ತೇಜ್ ಪಾಲ್ ಮತ್ತು ಭೂಮಿಕರವರುಗಳು ಪ್ಯಾರಾಚೂಟ್ ನಿಂದ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ತಿಳಿದು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
News coming in of a trainer aircraft crashed in #Chamrajnagar. More details awaited. #Karnataka pic.twitter.com/uGn8tUtwa1
— Imran Khan (@KeypadGuerilla) June 1, 2023