Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವಿಶ್ವದ ಕೋಟ್ಯಂತರ ಜನರ ಬದುಕಿಗಾಧಾರ ಡೈರಿ...

ವಿಶ್ವದ ಕೋಟ್ಯಂತರ ಜನರ ಬದುಕಿಗಾಧಾರ ಡೈರಿ ಉದ್ಯಮ

ಇಂದು ವಿಶ್ವ ಹಾಲು ದಿನ

ಪೂರ್ವಿಪೂರ್ವಿ1 Jun 2023 8:02 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ವಿಶ್ವದ ಕೋಟ್ಯಂತರ ಜನರ ಬದುಕಿಗಾಧಾರ ಡೈರಿ ಉದ್ಯಮ
ಇಂದು ವಿಶ್ವ ಹಾಲು ದಿನ

ವಿಶ್ವ ಹಾಲು ದಿನವನ್ನು ಪ್ರತೀ ವರ್ಷ  ಜೂನ್ 1ರಂದು ಆಚರಿಸಲಾಗುತ್ತದೆ. ಜಾಗತಿಕ ಆಹಾರವಾಗಿ ಹಾಲಿನ ಪ್ರಾಮುಖ್ಯತೆಯನ್ನು ಗುರುತಿಸುವತ್ತ ಗಮನಹರಿಸುವ ಆಚರಣೆ ಇದು. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) 2001ರಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಿಸಿತು.

ಪ್ರಪಂಚದಾದ್ಯಂತ ಹಾಲು ಮತ್ತು ಹಾಲು ಉತ್ಪಾದಿಸುವ ಕೈಗಾರಿಕೆಗಳಿಗೆ ಸಂಬಂಧಿಸಿದ ಚಟುವಟಿಕೆಗಳ ಪ್ರಚಾರಕ್ಕೆ ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ. ಆದ್ದರಿಂದ ಇದನ್ನು ವಿಶ್ವ ಡೈರಿ ದಿನ ಎಂದೂ ಕರೆಯುತ್ತಾರೆ. ಹಾಲಿನ ಪೌಷ್ಟಿಕಾಂಶದ ಮೌಲ್ಯ ಮತ್ತು ಅದರ ಉತ್ಪನ್ನಗಳ ಬಗ್ಗೆ ಮತ್ತು ಅದರ ಆರ್ಥಿಕ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಈ ದಿನ ಮಹತ್ವ ಪಡೆದಿದೆ. ಇದನ್ನು ಕೊಲಂಬಿಯಾ, ಮಲೇಶ್ಯ, ಜರ್ಮನಿ, ರೊಮೇನಿಯಾ, ಅಮೆರಿಕ, ಯುಎಇ ಮುಂತಾದ ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ.

ನೂರು ಕೋಟಿಗೂ ಹೆಚ್ಚು ಜನರು ಜೀವನೋಪಾಯಕ್ಕಾಗಿ ಡೈರಿ ವಲಯವನ್ನು ಅವಲಂಬಿಸಿದ್ದಾರೆ ಮತ್ತು 600 ಕೋಟಿಗೂ ಹೆಚ್ಚು ಜನ ನಿತ್ಯವೂ ಡೈರಿ ಉತ್ಪನ್ನಗಳನ್ನು ಸೇವಿಸುತ್ತಾರೆ ಎಂಬುದು ಎಫ್ಎಒ ಮಾಹಿತಿ. ಇಂಥದೊಂದು ಬೃಹತ್ ಉದ್ಯಮವನ್ನು ಗೌರವಿಸಲು ಮತ್ತು ವಿಶ್ವಾದ್ಯಂತ ಹಾಲಿನ ಆಹಾರದ ಮೌಲ್ಯದ ಅರಿವು ಮೂಡಿಸಲು ಈ ದಿನವನ್ನು ಗುರುತಿಸಲಾಗಿದೆ.

ವಿಶ್ವ ಹಾಲು ದಿನದ ಈ ವರ್ಷದ ಥೀಮ್ ಪೌಷ್ಟಿಕಾಂಶದ ಆಹಾರಗಳು ಮತ್ತು ಜೀವನೋಪಾಯವನ್ನು ಒದಗಿಸುವಾಗ ಡೈರಿಯು ಪರಿಸರದ ಮೇಲೆ ಅದರ ಪರಿಣಾಮವನ್ನು ಹೇಗೆ ಕಡಿಮೆ ಮಾಡಿದೆ ಎಂಬುದನ್ನು ಎತ್ತಿ ತೋರಿಸುವುದು.
ಸಮತೋಲಿತ ಆಹಾರದಲ್ಲಿ ಹಾಲಿನ ಮೌಲ್ಯದ ಬಗ್ಗೆ ಸಾರ್ವಜನಿಕ ಜ್ಞಾನವನ್ನು ಹೆಚ್ಚಿಸುವುದು ಈ ದಿನದ ಉದ್ದೇಶ. ಹಾಗೆಯೇ ಅದು ಸಮುದಾಯಗಳು ಮತ್ತು ಜೀವನೋಪಾಯಕ್ಕೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆಯೂ ಇದು ಗಮನ ಸೆಳೆಯುತ್ತದೆ.

ಡೈರಿ ಕ್ಷೇತ್ರವು ಜಾಗತಿಕ ಆಹಾರ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ, ಇದು ವಿಶ್ವದಾದ್ಯಂತದ ಅನೇಕ ಜನರಿಗೆ ಆರ್ಥಿಕ, ಪೌಷ್ಟಿಕಾಂಶ ಮತ್ತು ಸಾಮಾಜಿಕ ಪ್ರಯೋಜನಗಳನ್ನು ನೀಡುತ್ತದೆ. ಭಾರತ ಕೃಷಿಪ್ರಧಾನ ರಾಷ್ಟ್ರವಾಗಿರುವುದರಿಂದ ಹಾಲು ದೇಶದ ಪ್ರಮುಖ ಆಹಾರಗಳಲ್ಲಿ ಒಂದಾಗಿದೆ. ಹಾಗಾಗಿ ಈ ದಿನ ಇನ್ನೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.

ಹೈನು ಉದ್ಯಮ ಒಂದು ಬಗೆಯ ಸರಪಳಿಯಂತೆಯೂ ಇದೆ. ಜಗತ್ತಿನಾದ್ಯಂತ ಡೈರಿ ವಲಯದಲ್ಲಿ ಆಗಿರುವ ದೊಡ್ಡ ಮಟ್ಟದ ಬದಲಾವಣೆ ಇದಕ್ಕೆ ಕಾರಣ. ಬೃಹತ್ ಉತ್ಪಾದಕ ದೇಶಗಳು ಬಹುಪಾಲನ್ನು ಆಂತರಿಕವಾಗಿ ಬಳಸಿದರೆ, ನ್ಯೂಝಿಲ್ಯಾಂಡ್ನಂಥ ದೇಶಗಳು ತಮ್ಮ ಉತ್ಪಾದನೆಯ ಬಹುದೊಡ್ಡ ಭಾಗವನ್ನು ರಫ್ತುಮಾಡುತ್ತವೆ. ಆಂತರಿಕ ಬಳಕೆ ಅನೇಕ ವೇಳೆ ದ್ರವ ಹಾಲಿನ ಸ್ವರೂಪದಲ್ಲಿದ್ದರೆ, ಅಂತರ್ರಾಷ್ಟ್ರೀಯ ವ್ಯಾಪಾರದ ಬಹುಭಾಗ ಹಾಲಿನ ಪುಡಿಯಂಥ ಸಂಸ್ಕರಿಸಲ್ಪಟ್ಟ ಹೈನು ಉತ್ಪನ್ನಗಳ ಸ್ವರೂಪದಲ್ಲಿರುತ್ತದೆ. ವಿಶ್ವದಲ್ಲಿ ಭಾರತ ಅತಿ ದೊಡ್ಡ ಉತ್ಪಾದಕ ದೇಶವಾಗಿದ್ದರೆ, ನ್ಯೂಝಿಲ್ಯಾಂಡ್ ಅತಿ ದೊಡ್ಡ ರಫ್ತುದಾರ ದೇಶವಾಗಿದೆ. ಜಪಾನ್ ಹಾಲಿನ ಉತ್ಪನ್ನಗಳನ್ನು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ.

ಭಾರತದಲ್ಲಿ ಡೈರಿ ಉದ್ಯಮ ಪ್ರಾದೇಶಿಕವಾಗಿ ಅಸ್ಮಿತೆಯ ಪ್ರಶ್ನೆಯಾಗಿರುವುದನ್ನೂ ಕಾಣಬಹುದು. ಉದಾಹರಣೆಗೆ ಕರ್ನಾಟಕದಲ್ಲಿ ನಂದಿನಿ.

ಕರ್ನಾಟಕ ಡೈರಿ ಅಭಿವೃದ್ಧಿ ನಿಗಮವನ್ನು 1975ರಲ್ಲಿ ವಿಶ್ವಬ್ಯಾಂಕ್ ನೆರವಿನ ಡೈರಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಏಜೆನ್ಸಿಯಾಗಿ ರಚಿಸಲಾಯಿತು. ಕರ್ನಾಟಕ ಹಾಲು ಒಕ್ಕೂಟ 1984ರಲ್ಲಿ 13 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳೊಂದಿಗೆ ಡೈರಿ ಚಟುವಟಿಕೆಯನ್ನು ನಿರ್ವಹಿಸಲು ಮುಂದಾಯಿತು. ಈ ಸಂಸ್ಥೆಯ ಬ್ರ್ಯಾಂಡ್ ಹೆಸರು ನಂದಿನಿಯಾಗಿದ್ದು ಇದು 1983ರಲ್ಲಿ ಆರಂಭವಾಗಿದೆ. 21 ಮಾರ್ಚ್ 1983ರಂದು ರಾಜಾನುಕುಂಟೆಯಲ್ಲಿ ಮೊದಲ ಜಾನುವಾರು ಆಹಾರ ಘಟಕ ಪ್ರಾರಂಭಿಸಲಾಯಿತು. ಅದರ ಸಾಮರ್ಥ್ಯವನ್ನು 1997ರಲ್ಲಿ 100 ಮೆಟ್ರಿಕ್ ಟನ್ನಿಂದ 200 ಮೆಟ್ರಿಕ್ ಟನ್ಗೆ ವಿಸ್ತರಣೆ ಮಾಡಲಾಗಿದೆ.

ಪ್ರಸಕ್ತ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ದೇಶದ ಎರಡನೇ ಅತಿದೊಡ್ಡ ಡೈರಿ ಸಂಸ್ಥೆಯಾಗಿದೆ. ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ಸಂಗ್ರಹ ಮತ್ತು ಮಾರಾಟದ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೆಎಂಎಫ್ನ 16 ಹಾಲು ಘಟಕಗಳಿವೆ. ಪ್ರಾಥಮಿಕ ಡೈರಿ ಸಹಕಾರ ಸಂಘಗಳಿಂದ ಹಾಲನ್ನು ಸಂಗ್ರಹಿಸಿ, ಬಳಿಕ ರಾಜ್ಯದ ವಿವಿಧ ಪಟ್ಟಣಗಳು, ನಗರಗಳು, ಗ್ರಾಮೀಣ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ಹಾಲನ್ನು ವಿತರಿಸಲಾಗುತ್ತದೆ. ರಾಜ್ಯದಲ್ಲಿ 15,311 ಡೈರಿ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ.

ಕರ್ನಾಟಕದಲ್ಲಿ ಹಾಲಿನ ವಿಚಾರಕ್ಕೆ ಬಂದಾಗ ನಂದಿನಿ ಅತ್ಯಂತ ಜನಪ್ರಿಯ ಬ್ರ್ಯಾಂಡ್. ಹೀಗಿರುವಾಗಲೇ ಗುಜರಾತ್ನ ಅಮುಲ್ ಜೊತೆ ನಂದಿನಿಯನ್ನು ವಿಲೀನಗೊಳಿಸಲಾಗುತ್ತದೆ ಎಂಬ ಮಾತು ಕೇಳಿಬಂದು ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಅಮುಲ್ ತಾಜಾ ಹಾಲು ಕರ್ನಾಟಕದ ಮಾರುಕಟ್ಟೆಗೂ ಪ್ರವೇಶಿಸಲಿದೆ ಎಂಬ ಸುದ್ದಿ ಆಕ್ರೋಶಕ್ಕೆ ಕಾರಣವಾಗಿತ್ತು. 

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಪೂರ್ವಿ
ಪೂರ್ವಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X