ಕಾರ್ಕಳ: ಅಂಗನವಾಡಿ ಕಾರ್ಯಕರ್ತೆಗೆ ಲಕ್ಷಾಂತರ ರೂಪಾಯಿ ವಂಚನೆ; ಪ್ರಕರಣ ದಾಖಲು
ಕಾರ್ಕಳ: ಮೇಲ್ವಾಚಾರಕಿ ಹುದ್ದೆಗೆ ನೇಮಕಾತಿ ಮಾಡಿಸಿ ಕೊಡುವುದಾಗಿ ಆಮಿಷವೊಡ್ಡಿ ಅಂಗನವಾಡಿ ಕಾರ್ಯಕರ್ತೆಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆಯಿಂದ ವರದಿಯಾಗಿದೆ.
ಸಚ್ಚೇರಿಪೇಟೆಯ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಎಂಬುವವರಿಗೆ ಬೆಂಗಳೂರಿನ ವೇಣುಗೋಪಾಲ ಎಂಬವರು ಅಂಗನವಾಡಿಯ ಮೇಲ್ವಾಚಾರಕಿ ಹುದ್ದೆಗೆ ನೇಮಕಾತಿ ಮಾಡಿಸಿ ಕೊಡುವುದಾಗಿ ತಿಳಿಸಿ 2 ಲಕ್ಷ ಹಣವನ್ನು ಕೇಳಿದ್ದು ಅದರಂತೆ ಶ್ರೀಮತಿ ಶಶಿಕಲಾರವರು ಮುಂಡ್ಕೂರು ಗ್ರಾಮದ ಸಚ್ಚರೀಪೇಟೆ ಕೆನರಾ ಬ್ಯಾಂಕ್‌ನಲ್ಲಿರುವ ತನ್ನ ಖಾತೆಯಿಂದ ಮೊದಲ ಬಾರಿಗೆ ದಿನಾಂಕ 16/11/2021 ರಂದು ರೂಪಾಯಿ 80,000/- ರನ್ನು ವೇಣುಗೋಪಾಲನ ಅಣ್ಣ ವಿಶ್ವನಾಥರವರ ಬ್ಯಾಂಕ್ ಖಾತೆಗೆ ಹಣ ಕಳುಹಿಸಿಕೊಟ್ಟಿದ್ದು, ನಂತರ ದಿನಾಂಕ 24/11/2021 ರಂದು ರೂಪಾಯಿ 1,00,000/- ಲಕ್ಷ, ದಿನಾಂಕ 25/11/2021 ರಂದು ರೂಪಾಯಿ 25,000 ದಿನಾಂಕ 02/12/2021 ರಂದು ರೂಪಾಯಿ 55,003/- ದಿನಾಂಕ 14/12/2021 ರಂದು ರೂಪಾಯಿ 10,000/- ದಿನಾಂಕ 20/12/2021 ರಂದು ರೂಪಾಯಿ 10,000/- ಹೀಗೇ ಒಟ್ಟು 2,80,003/- ನಗದನ್ನು 5 ಬಾರಿ ಹಣವನ್ನು ವೇಣು ಗೋಪಾಲನ ಬ್ಯಾಂಕ್ ಖಾತೆಗೆ ಕಳುಹಿಸಿಕೊಟ್ಟಿದ್ದು ಅಲ್ಲದೇ ದಿನಾಂಕ 23/12/2021 ರಂದು ವೇಣುಗೋಪಾಲನು ಶ್ರೀಮತಿ ಶಶಿಕಲಾ ಇವರ ಮನೆಗೆ ಬಂದು ರಸ್ತೆ ಅಪಘಾತವಾಗಿ ಗಾಯಗೊಂಡ ತನ್ನ ಮಗಳ ಚಿಕಿತ್ಸೆ ಬಗ್ಗೆ ಸಾಲ ರೂಪದಲ್ಲಿ ಹಣ ಕೇಳಿದಂತೆ ಶ್ರೀಮತಿ ಶಶಿಕಲಾ ರವರು ರೂಪಾಯಿ 2,20,000/- ವನ್ನು ವೇಣಗೋಪಾಲನಿಗೆ ನೀಡಿದ್ದು, ಆತನು ಇದುವರೆಗೂ ವಾಪಾಸು ನೀಡದೇ ಹಣದ ಬಗ್ಗೆ ವಿಚಾರಿಸಿದ ಶ್ರೀಮತಿ ಶಶಿಕಲಾರವರ ಮೊಬೈಲ್ ನಂಬ್ರ ಬ್ಲಾಕ್ ಮಾಡಿದ್ದು, ಇವರಿಗೆ ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.