ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಇಲಾಖೆಯ ಮೊದಲ ಸಭೆ ಆರಂಭಿಸಿದ ಸಚಿವ ಮಹದೇವಪ್ಪ
''ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ‘ಸಂವಿಧಾನ ಪ್ರಸ್ತಾವನೆ ಓದು’ ಕಡ್ಡಾಯ''

ಬೆಂಗಳೂರು: ರಾಜ್ಯದ ನೂತನ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಡಾ. ಎಚ್ ಸಿ ಮಹದೇವಪ್ಪ ರವರು ತನ್ನ ಇಲಾಖೆಯ ಮೊದಲ ಸಭೆಯನ್ನು ಭಾರತದ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಆರಂಭಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಸಭೆಗೂ ಮುನ್ನ ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಸಂವಿಧಾನದ ಪೀಠಿಕೆಯನ್ನು ಓದಿದರು.
ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಸಚಿವರನ್ನು ಅಭಿನಂದಿದ್ದಾರೆ.
''ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ‘ಸಂವಿಧಾನ ಪ್ರಸ್ತಾವನೆ ಓದು’ ಕಡ್ಡಾಯ''
ಇನ್ನು ರಾಜ್ಯಾದ್ಯಂತ ಶಾಲೆ, ಕಾಲೇಜುಗಳಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಪಠಿಸುವುದು ಕಡ್ಡಾಯಗೊಳಿಸಲಾಗಿದ್ದು, ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲು ಸೂಚನೆ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಕರ್ನಾಟಕ ರಾಜ್ಯದ ನೂತನ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮಾನ್ಯ ಡಾ. ಹೆಚ್ ಸಿ ಮಹದೇವಪ್ಪ ರವರು ತನ್ನ ಇಲಾಖೆಯ ಮೊದಲ ಸಭೆ ಕರೆದು ಭಾರತದ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಪ್ರಾರಂಭಿಸುವುದು ಹೆಮ್ಮೆಯ ಸಂಗತಿ.
— ಮಧುಕೇಶ್ ಜಿ | Madhukesh G (@g_madhukesh) June 1, 2023
ಶುಭವಾಗಲಿ ಜೈ ಭೀಮ್@CMahadevappa @SWMinistryKar @SWDGok @CMofKarnataka @SunilBo45915204 pic.twitter.com/Qpqxezl1Xe