ಕಲಬುರಗಿ: ರಸ್ತೆ ಅಪಘಾತ; ಕೋಚಿಂಗ್ ಕ್ಲಾಸ್ ಶಿಕ್ಷಕ ಸಾವು
ಕಲಬುರಗಿ: ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದ ಶಿಕ್ಷಕರೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅತನೂರ ಗ್ರಾಮದ ನಿವಾಸಿ ಸಾತಪ್ಪ ಜಮಾದಾರ (36) ಮೃತ ಬೈಕ್ ಸವಾರ. ಗ್ರಾಮದಲ್ಲಿ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದರು. ಕೆಲಸಕ್ಕಾಗಿ ಕಲಬುರಗಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹಡಗಿಲ ಹಾರುತಿ ಬಳಿ ಹಿಂದಿನಿಂದ ಬಂದ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಶಿಕ್ಷಕ ಪತ್ನಿ, ಪುತ್ರ ಇಬ್ಬರನ್ನು ಅಗಲಿದ್ದಾರೆ. ಈ ಕುರಿತು ಫರಹತಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story