ಅರ್ತಿಕೆರೆ ಅಬ್ದುಲ್ ರಹಿಮಾನ್ ಹಾಜಿ ನಿಧನ

ಪುತ್ತೂರು :ಹಿರಿಯ ಕಾಂಗ್ರೆಸ್ ಮುಖಂಡ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾಗಿದ್ದ ಪುತ್ತೂರು ತಾಲೂಕಿನ ಆರ್ತಿಕೆರೆ ನಿವಾಸಿ ಅಬ್ದುಲ್ ರಹಿಮಾನ್ ಹಾಜಿ ಅರ್ತಿಕೆರೆ (72) ಹೃದಯಾಘಾತದಿಂದ ಗುರುವಾರ ತಡರಾತ್ರಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅರ್ತಿಕೆರೆ ಹಾಜಿ ಎಂದೇ ಪ್ರಚಲಿತರಾಗಿದ್ದ ಅಬ್ದುಲ್ ರಹಿಮಾನ್ ಹಾಜಿ ಅವರು ಈ ಹಿಂದೆ ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಚಾಪಳ್ಳ ಮತ್ತು ಬಡಕ್ಕೋಡಿ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿ, ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ನ ಪದಾಧಿಕಾರಿಯಾಗಿ, ವಿವಿಧ ಸಂಘ ಸಂಸ್ಥೆಗಳ ಮುಖಂಡರಾಗಿ ಸೇವೆ ಸಲ್ಲಿಸಿದ್ದರು.
ಶುಕ್ರವಾರ ಬಡಕ್ಕೋಡಿ ಜುಮಾ ಮಸೀದಿಯಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿ ಬಳಿಕ ಇಲ್ಲಿನ ದಫನ ಭೂಮಿಯಲ್ಲಿ ದಫನ ಕಾರ್ಯ ನಡೆಸಲಾಯಿತು.
Next Story