ಜನರ ಬೆವರ ಗಳಿಕೆಯ ಹಣ ಜನಕಲ್ಯಾಣ ಕಾರ್ಯಗಳಿಗೆ ಮಾತ್ರ ಬಳಕೆಯಾಗಲಿ: ಸಿಎಂ ಸಿದ್ದರಾಮಯ್ಯ
''ಹಸಿವು, ಬಡತನ, ನಿರುದ್ಯೋಗಗಳ ತಾಪ ನಾಡಿನ ಜನರಿಗೆ ತಟ್ಟದಿರಲಿ''

ಬೆಂಗಳೂರು: ''ಜನರ ಬೆವರ ಗಳಿಕೆಯ ಹಣ ಜನಕಲ್ಯಾಣ ಕಾರ್ಯಗಳಿಗೆ ಮಾತ್ರ ಬಳಕೆಯಾಗಲಿ, ಹಸಿವು, ಬಡತನ, ನಿರುದ್ಯೋಗಗಳ ತಾಪ ನಾಡಿನ ಜನರಿಗೆ ತಟ್ಟದಿರಲಿ ಎಂಬುದು ನಮ್ಮ ಸದುದ್ದೇಶ. ನಮ್ಮ ಈ 5 ಗ್ಯಾರೆಂಟಿಗಳನ್ನು ನಾಡಿನ ಜನತೆಗೆ ಅತ್ಯಂತ ಹೆಮ್ಮೆಯಿಂದ ಅರ್ಪಿಸುತ್ತಿದ್ದೇನೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ''ಚುನಾವಣಾ ಪೂರ್ವದಲ್ಲಿ ನಾವು ನಾಡಿನ ಜನತೆಗೆ ನೀಡಿದ್ದ 5 ಗ್ಯಾರೆಂಟಿ ಯೋಜನೆಗಳಿಗೆ ಇಂದು ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವ ಮೂಲಕ "ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ" ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೇವೆ'' ಎಂದು ತಿಳಿಸಿದ್ದಾರೆ.
''ಬೆಲೆಯೇರಿಕೆ, ನಿರುದ್ಯೋಗ, ಹಸಿವು, ಬಡತನಗಳಿಂದ ನೊಂದು ಬದುಕು ಸಾಗಿಸಲು ಹೆಣಗಾಡುತ್ತಿರುವ ಜನರ ಬದುಕಿಗೆ ನಮ್ಮ ಈ ಗ್ಯಾರೆಂಟಿ ಯೋಜನೆಗಳು ಹೊಸ ಚೈತನ್ಯ ತುಂಬಲಿದೆ ಎಂದು ಭಾವಿಸಿದ್ದೇನೆ'' ಎಂದು ಮುಖ್ಯಮಂತ್ರಿಗಳು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಚುನಾವಣಾ ಪೂರ್ವದಲ್ಲಿ ನಾವು ನಾಡಿನ ಜನತೆಗೆ ನೀಡಿದ್ದ 5 ಗ್ಯಾರೆಂಟಿ ಯೋಜನೆಗಳಿಗೆ ಇಂದು ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವ ಮೂಲಕ "ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ" ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೇವೆ.
— Siddaramaiah (@siddaramaiah) June 2, 2023
ಬೆಲೆಯೇರಿಕೆ, ನಿರುದ್ಯೋಗ, ಹಸಿವು, ಬಡತನಗಳಿಂದ ನೊಂದು ಬದುಕು ಸಾಗಿಸಲು ಹೆಣಗಾಡುತ್ತಿರುವ ಜನರ ಬದುಕಿಗೆ… pic.twitter.com/f0gZmzfPdo