ಗಾಂಜಾ ಸೇವನೆ: ನಾಲ್ವರ ಬಂಧನ

ಮಂಗಳೂರು : ಗಾಂಜಾ ಸೇವನೆ ಮಾಡಿದ ಆರೋಪದಲ್ಲಿ ಉರ್ವ ಪೊಲೀಸರು ಗುರುವಾರ ರಾತ್ರಿ 7:30ಕ್ಕೆ ನಗರದ ಚಿಲಿಂಬಿಗುಡ್ಡೆ ಪ್ರದೇಶದಲ್ಲಿ ನಾಲ್ವರನ್ನು ಸೆರೆ ಹಿಡಿದಿದ್ದಾರೆ.
ಕೇರಳ ಮಲಪುರಂ ಜಿಲ್ಲೆಯ ಶಾಮಿಲ್(22), ತಳಚೆರಿಯ ರೋಹಿತ್ ದಿವಾಕರ್(20), ಸೋನಿ ಸಾಬು(20) ಮತ್ತು ನಿಹಾಲ್ (21) ಬಂಧಿತರು.
ಈ ಯುವಕರು ಸಂಜೆ ವೇಳೆ ಮಾದಕ ವಸ್ತುಗಳನ್ನು ಸೇವನೆ ಮಾಡುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿ ಯುವಕರನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರು ನಿಷೇಧಿತ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story