ಬ್ರಾಹ್ಮಣ ಸಮುದಾಯದ ವಿರುದ್ದದ ಹೇಳಿಕೆಗಳ ವಿರುದ್ದ ಹೋರಾಡಲು ಕ್ರಿಮಿನಲ್ ಕಾನೂನು ಸಮಿತಿ ರಚನೆ
ಬೆಂಗಳೂರು: ಇತ್ತೀಚಿಗೆ ಬ್ರಾಹ್ಮಣ ಸಮುದಾಯದ ವಿರುದ್ದದ ಹೇಳಿಕೆಗಳು ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡುವವರ ವಿರುದ್ದ ಇಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭ ಗಾಯತ್ರೀ ಭವನದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವುದರ ಬಗ್ಗೆ ವಿಪ್ರ ವಕೀಲರ ಸಭೆಯಲ್ಲಿ ಸಭಾದ ರಾಜ್ಯಧ್ಯಕ್ಷ ಅಶೋಕ್ ಹಾರನಹಳ್ಳಿ ಕ್ರಿಮಿನಲ್ ಕಾನೂನು ಸಮಿತಿ ರಚನೆ ಮಾಡಿದರು .
ಸಮುದಾಯದ ಮೇಲೆ ನಡೆಯುತ್ತಿರುವ ಆಕ್ರಮಣಕಾರಿ ಪಿತೂರಿ ಮತ್ತು ವ್ಯವಸ್ಥೆಯ ವಿರುದ್ದ ನಾವು ನಮ್ಮನ್ನು ರಕ್ಷಿಸಿಕೊಳ್ಳಬೇಕಿದೆ ಎಂಬ ಅಭಿಪ್ರಾಯವೂ ಬಂದ ಹಿನ್ನಲೆಯಲ್ಲಿ ಕಾನೂನು ಸಮಿತಿ ರಚನೆ ಮಾಡಲಾಗಿದೆಯೆಂದು ಸಭಾ ಅಧ್ಯಕ್ಶರು ತಿಳಿಸಿದರು.
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಪುರೋಹಿತರ ಪರಿಷತ್ ವತಿಯಿಂದ ಮಾತನಾಡಿದ ಪುರೋಹಿತ ಅರ್ಚಕರು, ಸಮಾಜದಲ್ಲಿ ನಾವೀಗ ಭಯದ ವಾತಾವರಣದಲ್ಲಿದ್ದೇವೆ. ನಮ್ಮಿಂದ ಯಾರಿಗೂ ತೊಂದರೆ ಆಗದಿದ್ದರೂ ನಮ್ಮ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಹಾಗಾಗಿ ನಮಗೂ ನ್ಯಾಯಬದ್ಧವಾದ ಕಠಿಣ ಕಾನೂನಿನ ಅಗತ್ಯವಿದೆ ಎಂದರು .
ವಿಪ್ರ ಸಮುದಾಯ ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಕಾನೂನಿನ ನೆರವು, ಸಮುದಾಯದ ವಕೀಲರ ಸಂಘಟನೆ, ಮತ್ತು ಇತರ ವಿಷಯಗಳ ಬಗ್ಗೆ ಕ್ರಮ ಕೈಗೊಳ್ಳಲು ಹಿರಿಯ ವಕೀಲ ಪುತ್ತಿಗೆ ರಮೇಶ್ ನೇತೃತ್ವದಲ್ಲಿ ವಕೀಲರ ಸಮಿತಿ ರಚಿಸಲಾಯಿತು. ಇದಲ್ಲದೆ ಹಿರಿಯ ವಕೀಲ ಎ ಎನ್ ಕೃಷ್ಣಸ್ವಾಮಿ ನೇತೃತ್ವದಲ್ಲಿ ಮಠ ಮಂದಿರಗಳ ಸಮಸ್ಯೆಗಳ ಸಂಭಂದಿಸಿದಂತೆ ನೆರವು ನೀಡಲು ಉಪ ಸಮಿತಿ ರಚಿಸಲಾಯಿತು.
ಬ್ರಾಹ್ಮಣ ಸಮುದಾಯವನ್ನು ಅದರಲ್ಲೂ ಪುರೋಹಿತರನ್ನು ನಿಂದನೆ ಮಾಡುವವರ ಮೇಲೆ ಕ್ರಿಮಿನಲ್ ಮತ್ತು ಮಾನ ನಷ್ಟ ಮೊಕದ್ದಮೆ ಹೂಡಲು ಹಿರಿಯ ಕ್ರಿಮಿನಲ್ ವಕೀಲರಾದ ಸಿವಿ ಸುಧೀಂದ್ರ ಅವರ ನೇತೃತ್ವದಲ್ಲಿ ಉಪ ಸಮಿತಿ ರಚಿಸಲಾಯಿತು.
ಈ ಸಂಧರ್ಭದಲ್ಲಿ ಮಾಜಿ ಅಡಿಶನಲ್ ಅಡ್ವೊಕೇಟ್ ಜನರಲ್ ಅರ್ ಸುಬ್ರಮಣ್ಯ ,ಮಾಜಿ ಅಡಿಶನಲ್ ಅಡ್ವೊಕೇಟ್ ಜನರಲ್ ಅರುಣ್ ಶ್ಯಾಮ್, ಏ ಸಿ ಬಿ ಮಾಜಿ ಅಡ್ವೊಕೇಟ್ ಮನ ಮೋಹನ್ , ಸೀನಿಯರ್ ಅಡ್ವೊಕೇಟ್ ಪ್ರಶಾಂತ್ ಚಂದ್ರ, ಹಿರಿಯ ವಕೀಲ ಚಂದ್ರಶೇಖರ, ಬಾಲಗಂಗಾಧರ, ಶಂಕರ ಭಟ್, ಸುಧಾಕರ್ ಬಾಬು, TN ರಮೇಶ್, BR ವಿಶ್ವನಾಥ್ ಇನ್ನಿತರರು ಉಪಸ್ಥಿತರಿದ್ದರು.