Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕಾಂಗ್ರೆಸ್ ಸುಳ್ಳು ಆಶ್ವಾಸನೆ ನೀಡಿ...

ಕಾಂಗ್ರೆಸ್ ಸುಳ್ಳು ಆಶ್ವಾಸನೆ ನೀಡಿ ಮತದಾರರಿಗೆ ಶುದ್ಧ ಮೋಸ ಮಾಡಿದೆ: ಪ್ರಹ್ಲಾದ್ ಜೋಷಿ

3 Jun 2023 10:16 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಕಾಂಗ್ರೆಸ್ ಸುಳ್ಳು ಆಶ್ವಾಸನೆ ನೀಡಿ ಮತದಾರರಿಗೆ ಶುದ್ಧ ಮೋಸ ಮಾಡಿದೆ: ಪ್ರಹ್ಲಾದ್ ಜೋಷಿ

ಹುಬ್ಬಳ್ಳಿ: ಕಾಂಗ್ರೆಸ್ ಆಶ್ವಾಸನೆಗಳು ಬೋಗಸ್, ಸುಳ್ಳು ಆಶ್ವಾಸನೆ ನೀಡಿ ಮತದಾರರಿಗೆ ಶುದ್ಧ ಮೋಸ ಮಾಡಿದ್ದಾರೆ. ಘೋಷಿಸಿರುವ ಯೋಜನೆಗಳು ಜನರಿಗೆ ಸಿಗದಂತೆ ಹಲವು ಕಂಡೀಷನ್ ಹಾಕಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರೇ ಇಷ್ಟು ದಿನ ನಿರುದ್ಯೋಗಿಗಳಾಗಿದ್ದರು. ಈಗ ಭಜರಂಗದಳ, ಬಿಜೆಪಿ ಹೆಸರು ಹೇಳಿ ಅಸಭ್ಯವಾಗಿ ಮಾತಾಡ್ತಿದ್ದಾರೆ. ಬೊಮ್ಮಾಯಿ, ಶೋಭಾ, ಕಟೀಲ್ ಬಗ್ಗೆ ಕಾಂಗ್ರೆಸ್ ಅಹಂಕಾರದಿಂದ ವರ್ತಿಸುತ್ತಿದೆ.ಅನೇಕ ರಾಜ್ಯಗಳಲ್ಲಿ ನಿಮ್ಮ ಅಸ್ತಿತ್ವವೇ ಇಲ್ಲ, ನಿಮ್ಮ ಯೋಗ್ಯತೆ ಏನಿದೆ ತಿಳ್ಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.

ಆಮಿಷವೊಡ್ಡಿ ಅಧಿಕಾರಕ್ಕೆ ಬಂದಿದ್ದೇವೆ ಅಂತ ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ರಾಜಕೀಯ ಸೌಜನ್ಯತೆ, ಸಂಸ್ಕೃತಿಯಿದ್ರೆ ಇತರ ರಾಜ್ಯಗಳಲ್ಲಿ ನಿಮ್ಮ ಪರಿಸ್ಥಿತಿ ಏನಿದೆ ನೋಡಿ. ರಾಜ್ಯದ ಜನರೇ ಇವರಿಗೆ ತಕ್ಕ ಉತ್ತರ ಕೊಡ್ತಾರೆ.ಫ್ರಿ ಯೋಜನೆಗಳಿಗೆ ಪ್ರತಿವರ್ಷ 85ಸಾವಿರ ಕೋಟಿ ಖರ್ಚಾಗುತ್ತೆ. ಎಲ್ಲಿಂದ ಹಣ ತರ್ತಾರೆ? ಸಿಎಂ ಉತ್ತರಿಸಲಿ. ಸಾಲ ಮಾಡ್ತಾರಾ, ಅಭಿವೃದ್ಧಿ ಕೆಲಸ ನಿಲ್ಲಿಸ್ತಾರಾ? ತಿಳಿಸಲಿ ಎಂದು ಹೇಳಿದರು.

ರಾಜ್ಯ ಸರ್ಕಾರ ಹೇಳಿದ್ದೊಂದು ಮಾಡಿದ್ದೊಂದು. 200 ಯೂನಿಟ್ ಯಾಕೆ ಮಾಡಿಲ್ಲಾ? ನನಗೆ ಉತ್ತರ ಕೊಡಿ. ಭಾಷಣದಲ್ಲಿ ಭದ್ರಾ ನಿನಗೂ 200 ಯೂನಿಟ್, ಶಿವಾ ನಿನಗೂ ಇನ್ನೂರು ಯುನಿಟ್ ಅಂದಿದ್ರು. ಕಡಿಮೆ ವಿದ್ಯುತ್ ಬಳಸುವವರಿಗೆ ಏನು ಉಪಯೋಗ ಇಲ್ಲದಂತೆ ಮಾಡಿದ್ದಾರೆ. 200 ಯೂನಿಟ್ ಗಿಂತ ಹೆಚ್ಚು ಬಳಸುವವರ ಬಗ್ಗೆಯೂ ಸ್ಪಷ್ಟನೆ ಇಲ್ಲ. ಜನಕ್ಕೆ ಕಾಂಗ್ರೆಸ್ ಪಾರ್ಟಿ ಅವರು ಮೋಸ ಮಾಡಿದ್ದಾರೆ ಅನ್ನೋದು ಸ್ಪಷ್ಟವಾಗಿದೆ ಎಂದರು.

10 ಕೆಜಿ ಅಕ್ಕಿ ಅಂತ ಭಾಷಣ ಮಾಡಿದವರು ನೀವು. 5 ಕೆಜಿ ಅಕ್ಕಿಯನ್ನು ಭಾರತ ಸರ್ಕಾರ ಈಗಾಗಲೇ ಕೊಡುತ್ತಿದೆ, ಅದರ ಬಗ್ಗೆ ಏನು ಹೇಳ್ತೀರಿ? ಮುಖ್ಯಮಂತ್ರಿಗಳು ಇದಕ್ಕೆ ಉತ್ತರ ಕೊಡಬೇಕು. ಉಡಾಫೆ ಉತ್ತರ ನಡೆಯಲ್ಲ. ಭಾರತ ಸರ್ಕಾರದ 5 ಕೆಜಿ ಜೊತೆಗೆ ಪ್ರತ್ಯೇಕ 10 ಕೆಜಿ ಕೊಡ್ತೀರಾ,? ಇಲ್ಲ ಕೇವಲ 5 ಕೆಜಿ ಕೊಡ್ತಾರಾ  ಎಂದು ಪ್ರಶ್ನಿಸಿದರು.

ಎಲ್ಲಾ ಪದವೀಧರ ಯುವಕರಿಗೆ 3000 ಅಂತ ಯುವನಿಧಿ ಬಗ್ಗೆ ಹೇಳಿದ್ದರು. ಈಗ 2023ರಲ್ಲಿ ಪಾಸಾದ ಪದವೀಧರರು, ಡಿಪ್ಲೋಮಾ ಹೋಲ್ಡರ್‌ಗಳಿಗೆ ಮಾತ್ರ ಅನ್ನುತ್ತಿದ್ದಾರೆ. 2023ರ‌ ಮೊದಲು ನಿರುದ್ಯೋಗಿಗಳಿಲ್ವಾ, ಇದನ್ನ ಮೊದಲೇ ಹೇಳಬೇಕಿತ್ತಲ್ವಾ. ಶುದ್ಧವಾದ ಮೋಸವನ್ನು ಕಾಂಗ್ರೆಸ್ ಪಾರ್ಟಿ ಮಾಡಿದೆ.

ಗೃಹಲಕ್ಷ್ಮಿ ಯೋಜನೆ ಬಗ್ಗೆ ಮೊದಲ ಕ್ಯಾಬಿನೇಟ್‌ನಲ್ಲಿ ಇನ್ ಪ್ರಿನ್ಸಿಪಲ್ ಅಪ್ರೂವಲ್ ಅಂತಾ ಮೊದಲು ನಾಟಕ ಮಾಡಿದ್ರು. ಈಗ ಅಪ್ಲಿಕೇಶನ್ ಹಾಕಲು ಹೇಳಿ ತಡ ಮಾಡುತ್ತಿದ್ದಾರೆ, ಬೇಕಂತಲೇ ಗೊಂದಲ ಸೃಷ್ಟಿಸುತ್ತಿದ್ದಾರೆ. ಹೆಚ್ಚು ಅಪ್ಲಿಕೇಷನ್ ಹಾಕದಂತೆ ಕಂಡೀಷನ್ ಹಾಕಿದ್ದಾರೆ. ಸುಳ್ಳು ಹೇಳಿ ಜನರಿಗೆ ಮೋಸ ಮಾಡುವುದು ಸಿದ್ದರಾಮಯ್ಯ, ಡಿಕೆಶಿ ಸ್ಟ್ರಾಟಜಿ ಎಂದು ಹೇಳಿದರು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X