ದ.ಕ.ಜಿಲ್ಲೆ: ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಮತ್ತೆ ಸ್ವಸ್ಥಾನಕ್ಕೆ
ಚುನಾವಣೆಯ ಹಿನ್ನೆಲೆ

ಮಂಗಳೂರು, ಜೂ.3: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ದ.ಕ. ಎಸ್ಪಿ ವ್ಯಾಪ್ತಿಯಲ್ಲಿ ವರ್ಗಾವಣೆಗೊಂಡ ಪೊಲೀಸ್ ಇನ್‌ಸ್ಪೆಕ್ಟರ್ ಮತ್ತೆ ಈ ಹಿಂದಿನ ಠಾಣೆಗೆ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿಡಿದೆ.
ಮಂಗಳೂರು ಪೂರ್ವ ಸಂಚಾರ ಠಾಣೆ: ಗೋಪಾಲಕಷ್ಣ ಭಟ್, ಸುಳ್ಯ ವೃತ್ತ : ನವೀನ್ ಚಂದ್ರಜೋಗಿ, ದ.ಕ. ಮಹಿಳಾ ಠಾಣೆ: ಮಧುಸೂದನ್ ಎನ್. ರಾವ್, ಕೊಣಾಜೆ ಠಾಣೆ: ಪ್ರಕಾಶ್ ದೇವಾಡಿಗ, ಮಂಗಳೂರು ನಗರ ಸೆನ್ ಠಾಣೆ: ಸತೀಶ ಎಂ.ಪಿ., ನಗರ ಎಸ್‌ಬಿ: ಮುಹಮ್ಮದ್ ಶರೀಫ್, ಕಂಕನಾಡಿ ನಗರ ಠಾಣೆ: ಭಜಂತ್ರಿ ಎಸ್., ದ.ಕ. ಸೆನ್ ಠಾಣೆ: ಸವಿತ್ರತೇಜ, ಸಿಸಿಆರ್‌ಬಿ ಮಂಗಳೂರು ನಗರ: ಗುರುದತ್ತ ಕಾಮತ್, ನಗರ ಮಹಿಳಾ ಠಾಣೆ: ಲೋಕೇಶ್ ಎ.ಸಿ., ಮಂಗಳೂರು ನಗರ ಗ್ರಾಮಾಂತರ: ಜಾನ್ಸನ್ ಕಿರಣ್ ಡಿಸೋಜ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.
ಇದೇ ರೀತಿ ಸೂಚಿತ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ಅವರು ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗಳಿಗೆ ಮರು ವರ್ಗಾಯಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.