ಉಡುಪಿ ಎಸ್‌ಡಿಎಂ ಕಾಲೇಜಿನಲ್ಲಿ ಬಾಣಂತಿ ಮಗು ಆರೈಕೆ ತರಬೇತಿ
ಉಡುಪಿ, ಜೂ.3: ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದ ಆಶ್ರಯದಲ್ಲಿ ಆಸಕ್ತ ಮಹಿಳೆಯರಿಗೆ ಮೂರು ವಾರಗಳ ಬಾಣಂತಿ-ಮಗು ಆರೈಕೆ ತರಬೇತಿ ಕಾರ್ಯಕ್ರಮವೊಂದನ್ನು ಆಯೋಜಿಸ ಲಾಗಿದೆ.
ತರಬೇತಿಯ ವೇಳೆ ಬಾಣಂತಿಯರಿಗೆ ವಿಶೇಷ ಮದ್ದು ತಯಾರಿಕೆ, ಊಟ, ಉಪಚಾರ, ಮಗುವಿನ ಸ್ನಾನದ ವಿಧಾನ, ಔಷಧ ತಯಾರಿಕಾ ವಿಧಾನ ಇತ್ಯಾದಿಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ತರಬೇತಿಯ ಅವಧಿ ಬೆಳಗ್ಗೆ 9ರಿಂದ ಸಂಜೆ 5ಗಂಟೆಯವರೆಗೆ. ಕೋರ್ಸ್ ಅವಧಿ ಮೂರು ವಾರಗಳು.
ಕನಿಷ್ಠ ಎಸೆಸೆಲ್ಸಿ ತೇರ್ಗಡೆಗೊಂಡವರು ತರಬೇತಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂ.10. 20 ಮಂದಿ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ಮೊದಲು ನೊಂದಾಯಿಸಿ ಕೊಂಡವರಿಗೆ ಮೊದಲ ಆದ್ಯತೆ. 20 ವರ್ಷ ಮೇಲ್ಪಟ್ಟ ಆಸಕ್ತರು ಇದರಲ್ಲಿ ಭಾಗವಹಿಸ ಬಹುದು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 8660819737 ಹಾಗೂ 8971027950 ಎಂದು ಎಸ್‌ಡಿಎಂ ಕಾಲೇಜಿನ ಪ್ರಕಟಣೆ ತಿಳಿಸಿದೆ.