ರಾಷ್ಟ್ರೀಯ ಮಟ್ಟದ ಕರಾಟೆ: ಶಕ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಚಿನ್ನದ ಪದಕ
ಮಂಗಳೂರು ಜೂ. 3: ಶಕ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಮಯೂರ್ ಡಿ ಶೆಟ್ಟಿ ಹಾಗೂ ವಿನೀತ್ ಕುಮಾರ್ ಮೇ 13 ರಿಂದ 14ರವರೆಗೆ ಕೇರಳದ ತ್ರಿಶೂರ್‌ನಲ್ಲಿ ನಡೆದ 45ನೇ ಅಂತರ್ ರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್‌ಶಿಪ್ 2023ರಲ್ಲಿ ಚಿನ್ನ ಜಯಿಸಿದ್ದಾರೆ.
ವಿನೀತ್ ಕುಮಾರ್ ಕುಮಿಟೆಯಲ್ಲಿ ಚಿನ್ನದ ಪದಕ, ಕಟಾದಲ್ಲಿ ಚಿನ್ನದ ಪದಕ ಮತ್ತು ಮಯೂರ್ ಡಿ ಶೆಟ್ಟಿ ಕುಮಿಟೆ ಯಲ್ಲಿ ಚಿನ್ನ, ಕಟಾದಲ್ಲಿ ಬೆಳ್ಳಿಪದಕವನ್ನು ಗೆದ್ದಿದ್ದಾರೆ. ಇವರನ್ನು ಶಕ್ತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಂಜಿತ್ ನಾಯಕ್, ಆಡಳಿತಾಧಿಕಾರಿ ಡಾ. ಕೆ.ಸಿ ನಾಯಕ್, ಪ್ರಧಾನನ ಸಲಹೆಗಾರ ರಮೇಶ ಕೆ, ಶಕ್ತಿ ಪಪೂ ಪ್ರಾಂಶುಪಾಲರಾದ ಪೃಥ್ವಿರಾಜ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲ ರವಿಶಂಕರ್ ಹೆಗಡೆ ಅಭಿನಂದಿಸಿದ್ದಾರೆ.
Next Story