ಒಡಿಶಾ ರೈಲು ದುರಂತದಲ್ಲಿ ದ.ಕ. ಜಿಲ್ಲೆಯ ಯಾರೂ ಕೂಡಾ ಸಿಲುಕಿದ ಮಾಹಿತಿ ಇಲ್ಲ: ಡಿಸಿ ರವಿಕುಮಾರ್

ಮಂಗಳೂರು, ಜೂ.3: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ದುರಂತದಲ್ಲಿ ದ.ಕ.ಜಿಲ್ಲೆಯ ಯಾರೂ ಕೂಡಾ ಸಿಲುಕಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನ ನಿವಾಸಿಗಳು ದುರಂತಕ್ಕಿಡಾಗಿರುವ ರೈಲಿನಲ್ಲಿದ್ದ ಬಗ್ಗೆ ಮಾಹಿತಿ ಇಲ್ಲ ಹಾಗೂ ಯಾರೂ ಕೂಡಾ ಈ ಬಗ್ಗೆ ಜಿಲ್ಲಾಡಳಿತವನ್ನು ಸಂಪರ್ಕಿಸಿಲ್ಲ ಎಂದು ಅವರು ಹೇಳಿದ್ದಾರೆ.
Next Story