ಕಾಮಗಾರಿ ಹಿನ್ನೆಲೆ: ವಾಹನ ಸಂಚಾರ ಬದಲಾವಣೆ

ಉಡುಪಿ, ಜೂ.3: ಉಡುಪಿ ನಗರಸಭಾ ವ್ಯಾಪ್ತಿಯ ಶಿರಿಬೀಡು ವಾರ್ಡಿನ ಸಿಟಿ ಬಸ್‌ನಿಲ್ದಾಣದಿಂದ ಕಾಫಿಯಾ ಹೋಟೆಲ್ ವರೆಗೆ ಒಳಚರಂಡಿ ಜಾಲದ ಪೈಪ್ ಬದಲಾವಣೆ ಮಾಡಿ ಕಾಂಕ್ರೀಟ್ ಛೇಂಬರ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ, ಈ ರಸ್ತೆಯಲ್ಲಿ ಜೂನ್ 15ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದ್ದು, ಬದಲಿ ವ್ಯವಸ್ಥೆಯಾಗಿ, ಸರ್ವಿಸ್ ಬಸ್‌ನಿಲ್ದಾಣದ ಎದುರಿನಿಂದ ಕೆ.ಎಸ್.ಆರ್.ಟಿ.ಸಿ ಬಸ್‌ನಿಲ್ದಾಣ ಮಾರ್ಗ ವಾಗಿ ಚಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ನಗರಸಭೆಯ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
Next Story