ನಿವೃತ್ತ ಎಎಸ್‌ಐ ಅಬುಸೇಟ್ ಬ್ಯಾರಿ ನಿಧನ

ಮಂಗಳೂರು, ಜೂ.3: ನಗರದ ಲೇಡಿಹಿಲ್ ನಿವಾಸಿ ನಿವೃತ್ತ ಪೊಲೀಸ್ ಸಹಾಯಕ ಉಪನಿರೀಕ್ಷಕ (ಎಎಸ್‌ಐ) ಅಬುಸೇಟ್ ಬ್ಯಾರಿ (78) ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.
ಮೂಲತ: ಕುಂದಾಪುರದ ಹಂಗಳೂರು ನಿವಾಸಿ ಅಬುಸೇಟ್ ಬ್ಯಾರಿ ಅವರು 30 ವರ್ಷಗಳ ಕಾಲ ಮಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story