ಜೂ. 4ರಂದು ಸ್ಪೀಕರ್ ಯುಟಿ ಖಾದರ್ ಗೆ ಅಭಿನಂದನಾ ಕಾರ್ಯಕ್ರಮ

ದೇರಳಕಟ್ಟೆ: ಕರ್ನಾಟಕ ವಿಧಾನಸಭೆಯ ನೂತನ ಸಭಾಧ್ಯಕ್ಷ ಯುಟಿ ಖಾದರ್ ಅವರಿಗೆ ಎಸ್.ಕೆ.ಎಸ್.ಎಸ್.ಎಫ್ ದೇರಳಕಟ್ಟೆ ವಲಯ ಸಮಿತಿ ವತಿಯಿಂದ ಜೂ.4ರಂದು ಸಂಜೆ 7 ಗಂಟೆಗೆ ದೇರಳಕಟ್ಟೆ ಬಿ.ಸಿ.ಸಿ ಹಾಲ್ ನಲ್ಲಿ ಅಭಿನಂದನಾ ಕಾರ್ಯಕ್ರಮವು ನಡೆಯಲಿದೆ.
ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನ್ ಫೈಝಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಯ್ಯಿದ್ ಅಮೀರ್ ತಂಙಳ್, ಇರ್ಷಾದ್ ದಾರಿಮಿ ಮಿತ್ತಬೈಲ್, ಅನೀಸ್ ಕೌಸರಿ, ಇಸ್ಹಾಖ್ ಫೈಝಿ ದೇರಳಕಟ್ಟೆ, ಅಬೂಬಕ್ಕರ್ ರಿಯಾಝ್ ರಹ್ಮಾನಿ ಮತ್ತಿತರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story