'ಎಸ್ಸೆಸ್ಸೆಫ್ ಗೋಲ್ಡನ್ 50' ಸಮ್ಮೇಳನ: ಜೂ.5ಕ್ಕೆ ಬೆಂಗಳೂರಿನಲ್ಲಿ ಸ್ವಾಗತ ಸಮಿತಿ ರಚನಾ ಸಭೆ

ಬೆಂಗಳೂರು: ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಯ ಭಾಗವಾಗಿ ಸೆಪ್ಟೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಗೋಲ್ಡನ್ ಫಿಫ್ಟಿ ಸಮಾವೇಶದ ಪೂರ್ವಭಾವಿಯಾಗಿ ಸ್ವಾಗತ ಸಮಿತಿ ರಚನಾ ಸಭೆಯು ಶಿವಾಜಿನಗರ ಕ್ವೀನ್ಸ್ ರೋಡ್ ನಲ್ಲಿರುವ ದಾರುಸ್ಸಲಾಮ್ ಆಡಿಟೋರಿಯಂನಲ್ಲಿ ದಿನಾಂಕ 05 -06 -2023 ಸೋಮವಾರ ರಾತ್ರಿ ನಡೆಯಲಿದೆ.
ಪ್ರಸಕ್ತ ಸಭೆಯಲ್ಲಿ ಕೇರಳ ಮತ್ತು ಕರ್ನಾಟಕ ರಾಜ್ಯ ನಾಯಕರುಗಳಾದ ಹಂಝ ಸಖಾಫಿ ಬಂಟ್ವಾಳ, ಶಾಫಿ ಸಹದಿ ಬೆಂಗಳೂರು ,ರಾಶೀದ್ ಬುಖಾರಿ ಕೇರಳ, ಸುಫಿಯಾನ್ ಸಖಾಫಿ ಮತ್ತು ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಮುಸ್ಲಿಂ ಜಮಾಹತ್, ಎಸ್ ಎಂ ಎ, ಎಸ್ ಜೆ ಎಂ , ಎಸ್ ವೈ ಎಸ್ ಮತ್ತು ಎಸ್ ಎಸ್. ಎಫ್ ನ ನಾಯಕರು,ಮತ್ತು ಎಲ್ಲಾ ಶಾಖೆಗಳ ಸಕ್ರೀಯ ಸದಸ್ಯರುಗಳು ಭಾಗವಹಿಸಲಿದ್ದಾರೆ.
Next Story