ಬೇಡವೆಂದು ಹೇಳಿ ಸದ್ದಿಲ್ಲದೆ ಝೀರೋ ಟ್ರಾಫಿಕ್‌ನಲ್ಲಿ ಓಡಾಡುತ್ತಿರುವ ಸಿದ್ದರಾಮಯ್ಯ: ಬಿಜೆಪಿ ಆರೋಪ
''ಮುಖ್ಯಮಂತ್ರಿಗಳು ಬೇಡ ಎಂದು ಹೇಳಿದ್ದು ಸುದ್ದಿಯಾಗೋದಕ್ಕೆ ಮಾತ್ರ...''

ಬೆಂಗಳೂರು: 'ಝೀರೋ ಟ್ರಾಫಿಕ್ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹೇಳಿದ್ದು ಸುದ್ದಿಯಾಗೋದಕ್ಕೆ ಮಾತ್ರ. ಈಗ ಸದ್ದಿಲ್ಲದೆ ಮತ್ತೆ ಝೀರೋ ಟ್ರಾಫಿಕ್‌ನಲ್ಲಿ ಓಡಾಡುತ್ತಿದ್ದಾರೆ' ಎಂದು ವಿಪಕ್ಷ ಬಿಜೆಪಿ ಆರೋಪಿಸಿದೆ.
ರವಿವಾರ ಟ್ವೀಟ್ ಮಾಡಿರುವ ಬಿಜೆಪಿ @BJP4Karnataka, ''ಇದು #ReverseGearCongress ಎಂದು ನಾವು ಅಂದೇ ಹೇಳಿದ್ದೆವು. ಈಗದು ಪ್ರತ್ಯಕ್ಷವಾಗಿ ಸಾಬೀತಾಗುತ್ತಿದೆ ಅನ್ನುವುದೂ ರಾಜ್ಯದ ಪಾಲಿಗೆ ಖೇದಕರ'' ಎಂದು ಟೀಕಿಸಿದೆ.
''200 ಯುನಿಟ್ ಉಚಿತ ವಿದ್ಯುತ್ ಯೋಜನೆ ಅದೆಂಥಾ ದೋಖಾ ಎಂದು ದಿನಹೋದಂತೆ ಸಾಬೀತಾಗುತ್ತಿದೆ. 200 ಯುನಿಟ್ ಫ್ರೀ ಅಂದಿಲ್ಲವೆಂದು ಇಂಧನ ಸಚಿವರೇ ರಿವರ್ಸ್ ಕನೆಕ್ಷನ್ ಕೊಡುತ್ತಿದ್ದಾರೆ. ಜನ, ಕೈಗಾರಿಕೆ ಮತ್ತು ಉದ್ಯೋಗ ಸೃಷ್ಟಿಗೆ ಶಾಕ್ ಮಾತ್ರವಲ್ಲ ಶಾರ್ಟ್ ಸರ್ಕ್ಯೂಟ್‌ನ ಅನುಭವ ಕೊಡಲು ಸಚಿವ ಕೆ.ಜೆ ಜಾರ್ಜ್ ಅವರು ಸನ್ನದ್ಧರಾಗಿದ್ದಾರೆ'' ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಇದು #ReverseGearCongress ಎಂದು ನಾವು ಅಂದೇ ಹೇಳಿದ್ದೆವು. ಈಗದು ಪ್ರತ್ಯಕ್ಷವಾಗಿ ಸಾಬೀತಾಗುತ್ತಿದೆ ಅನ್ನೂವುದೂ ರಾಜ್ಯದ ಪಾಲಿಗೆ ಖೇದಕರ.
— BJP Karnataka (@BJP4Karnataka) June 4, 2023
ಜೀರೋ ಟ್ರಾಫಿಕ್ ಬೇಡ ಎಂದು ಮುಖ್ಯಮಂತ್ರಿ @siddaramaiah ನವರು ಹೇಳಿದ್ದು ಸುದ್ದಿಯಾಗೋದಕ್ಕೆ ಮಾತ್ರ. ಈಗ ಸದ್ದಿಲ್ಲದೆ ಮತ್ತೆ ಜೀರೋ ಟ್ರಾಫಿಕ್‌ನಲ್ಲಿ ಓಡಾಡುತ್ತಿದ್ದಾರೆ.
200 ಯುನಿಟ್ ಉಚಿತ… pic.twitter.com/OrfXG4DChw