ಒಡಿಶಾದಲ್ಲಿ ಸಿಲುಕಿದ್ದ ರಾಜ್ಯದ 17 ಮಂದಿ ಜಾನಪದ ಕಲಾವಿದರಿಗೆ ವಿಮಾನ ವ್ಯವಸ್ಥೆ: ಸಚಿವ ಸಂತೋಷ್ ಲಾಡ್

ಬೆಂಗಳೂರು: ಒಡಿಶಾದ ಪುರಿಯಲ್ಲಿ ನಡೆದ ಜಾನಪದ ಜಾತ್ರೆಯಲ್ಲಿ ಭಾಗವಹಿಸಲು ತೆರಳಿದ್ದ ರಾಜ್ಯದ 17 ಜನರ ಕಲಾವಿದರು ಸುರಕ್ಷಿತವಾಗಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಕಲಾವಿದರ ಫೋಟೊ ಸಹಿತ ಟ್ವೀಟ್ ಮಾಡಿರುವ ಸಚಿವ ಲಾಡ್, ''ಜಾನಪದ ಕಲಾವಿದರು ರೈಲು ದುರಂತದ ಹಿನ್ನೆಲೆಯಲ್ಲಿ ಹಿಂದಿರುಗಿ ಬರಲಾರದೇ ಒಡಿಶಾದ ಪುರಿಯಲ್ಲಿ ಅತಂತ್ರ ಸ್ಥಿತಿಯಲ್ಲಿದ್ದರು. ಈ ಕಲಾತಂಡವನ್ನು ಕ್ಷೇಮವಾಗಿ ಕರೆತರಲು ವಿಮಾನ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ'' ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಕೊಲ್ಕತ್ತಾದ ಹೌರಾದಲ್ಲಿ ಉಳಿದಿದ್ದ 32 ಕ್ರೀಡಾಪಟುಗಳು ರವಿವಾರ ಬೆಳಗ್ಗೆ ಇಂಡಿಗೋ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಒಡಿಶಾದ ಪುರಿಯಲ್ಲಿ ನಡೆದ ಜಾನಪದ ಜಾತ್ರೆಯಲ್ಲಿ ಭಾಗವಹಿಸಲು ತೆರಳಿದ್ದ ರಾಜ್ಯದ 17 ಜನರ ಕಲಾವಿದರ ತಂಡ ರೈಲು ದುರಂತದ ಹಿನ್ನೆಲೆಯಲ್ಲಿ ಹಿಂದಿರುಗಿ ಬರಲಾರದೇ ಅತಂತ್ರ ಸ್ಥಿತಿಯಲ್ಲಿದ್ದರು.
— Santosh Lad Official (@SantoshSLadINC) June 4, 2023
ಈ ಕಲಾತಂಡವನ್ನು ಕ್ಷೇಮವಾಗಿ ಕರೆತರಲು ವಿಮಾನ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ.#OdishaTrainAccident @CMofKarnataka | @siddaramaiah pic.twitter.com/cqo9NopSc6