ಈಶ್ವರ್‌ಗೆ ಡಾಕ್ಟರೇಟ್ ಪದವಿ

ಮಂಗಳೂರು, ಜೂ.4: ಆಳ್ವಾಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಈಶ್ವರ್ ಎಂ.ಜಿ. ಸಲ್ಲಿಸಿದ ‘ಹೆಲ್ತ್ ಕೇರ್ ಸರ್ವಿಸ್ ಇನ್ ಅರ್ಬನ್-ರೂರಲ್ ಕರ್ನಾಟಕ : ಎ ಸ್ಟಡಿ ಇನ್ ಶಿವಮೊಗ್ಗ ಡಿಸ್ಟ್ರಿಕ್ಟ್’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಮೆಲ್ಪಾಲ್ ನಿವಾಸಿ ದಿ. ಗೋಪಾಲ-ಕಾಳಿಯಮ್ಮ ದಂಪತಿಯ ಪುತ್ರ ಈಶ್ವರ್ ಅವರು ಕುವೆಂಪು ವಿವಿಯ ಪ್ರಾಧ್ಯಾಪಕ ಪ್ರೊ. ಬಿ. ಜಯರಾಮ್ ಭಟ್ ಅವರ ಮಾರ್ಗ ದರ್ಶನದಲ್ಲಿ ಈ ಸಂಶೋಧನೆ ಕೈಗೊಂಡಿದ್ದರು.
Next Story