ಬಾಬಾ ರಾಮ್ದೇವ್ ಮಾಲಕತ್ವದ ಕಂಪೆನಿ ತ್ಯಾಜ್ಯ ಹರಿಸುವ ಸ್ಥಳಕ್ಕೆ ಪ್ರೊ. ನರೇಂದ್ರ ನಾಯಕ್ ಭೇಟಿ

ಸುರತ್ಕಲ್: ಖ್ಯಾತ ವಿಚಾರವಾದಿ, ಪರಿಸರ ತಜ್ಞರೂ ಆಗಿರುವ ಪ್ರೊ. ನರೇಂದ್ರ ನಾಯಕ್ ಅವರು ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಬಾಬಾ ರಾಮ್ ದೇವ್ ಮಾಲಕತ್ವದ ರುಚಿ ಸೋಯಾ (ಪತಂಜಲಿ) ಕೈಗಾರಿಕೆ ಪಲ್ಗುಣಿ ನದಿಗೆ ಅಕ್ರಮವಾಗಿ ಕೈಗಾರಿಕಾ ತ್ಯಾಜ್ಯ ಹರಿಸುವ ಕೊಳವೆಗಳು ಪತ್ತೆಯಾದ ಸ್ಥಳಕ್ಕೆ ರವಿವಾರ ಭೇಟಿ ನೀಡಿದರು.
ಇದೇ ವೇಳೆ ಮಾಲಿನ್ಯದ ಪ್ರಮಾಣ, ಆಗಿರುವ ಹಾನಿಯನ್ನು ವೀಕ್ಷಿಸಿ, ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಹೋರಾಟಗಾರರೊಂದಿಗೆ ಹಂಚಿಕೊಂಡರು. ಮುಂದಿನ ಹೋರಾಟಗಳಿಗೆ ಜೊತೆಗೆ ಇರುವು ದಾಗಿ ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಜೋಕಟ್ಟೆ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಪಲ್ಗುಣಿ ನದಿಗೆ ಅಕ್ರಮವಾಗಿ ಮಾರಕ ಕೈಗಾರಿಕಾ ತ್ಯಾಜ್ಯ ಹರಿಸುವ ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಬಾಬಾ ರಾಮ್ ದೇವ್ ಮಾಲಕತ್ವದ ರುಚಿ ಸೋಯಾ (ಪತಂಜಲಿ) ಕೈಗಾರಿಕೆಗೆ ಬೀಗಜಡಿಯ ಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರಿಯಲಿದೆ. ತುಳುನಾಡಿನ ನೆಲ, ಜಲ, ಜೀವನದಿ ಫಲ್ಗುಣಿ ಉಳಿಸಲು ಎಲ್ಲರೂ ಒಂದಾಗಿ ಧ್ವನಿ ಎತ್ತಬೇಕಿದೆ ಎಂದು ನುಡಿದರು.
ಈ ಸಂದರ್ಭ ಕಾರ್ಮಿಕ ನಾಯಕ ಸುನಿಲ್ ಕುಮಾರ್ ಬಜಾಲ್, ಡಿವೈಎಫ್ಐ ನಾಯಕರಾದ ಅಡ್ವಕೇಟ್ ಚರಣ್ ಶೆಟ್ಟಿ, ಡಿವೈಎಫ್ಐ ಮುಂದಾಳುಗಳಾದ ನಿತಿನ್ ಬಂಗೇರ, ಬಾವು ಪಂಜಿಮೊಗರು ಮೊದಲಾದವರಿದ್ದರು.

