ಎಸ್ ಕೆ ಎಸ್ ಎಸ್ ಎಫ್ ವತಿಯಿಂದ ಸ್ಪೀಕರ್ ಯುಟಿ ಖಾದರ್ ಗೆ ಅಭಿನಂದನೆ

ಕೊಣಾಜೆ: ಯಾರಿಗೂ ತಾರತಮ್ಯ ಮಾಡದೆ, ಸಮಾನತೆಯೊಂದಿಗೆ ದ್ವೇಷ ಮುಕ್ತ, ದುಶ್ಚಟ ಮುಕ್ತ ಸಮಾಜ ನಿರ್ಮಾಣವಾಗಬೇಕು ಹಾಗೂ ಕೊಮುವಾದ ವನ್ನು ಬದಿಗಿಟ್ಟು ಸುಸಜ್ಜಿತ ಸಮಾಜ ನಿರ್ಮಾಣ ಮಾಡಲು ಒತ್ತು ನೀಡುವುದು ನಮ್ಮೆಲ್ಲರ ಆಧ್ಯತೆಯಾಗಿದೆ. ಕೋಮುವಾದವನ್ನು ಜನರು ಒಪ್ಪುವುದಿಲ್ಲ ಎನ್ನುವುದಕ್ಕೆ ಕರ್ನಾಟಕದ ಚುನಾವಣಾ ಫಲಿತಾಂಶವೇ ಉದಾಹರಣೆಯಾಗಿದೆ ಎಂದು ವಿಧಾನ ಸಭೆ ಅಧ್ಯಕ್ಷ ಯುಟಿ ಖಾದರ್ ಹೇಳಿದರು.
ಅವರು ಎಸ್.ಕೆ.ಎಸ್.ಎಸ್.ಎಫ್ ದೇರಳಕಟ್ಟೆ ವಲಯ ಸಮಿತಿ ವತಿಯಿಂದ ದೇರಳಕಟ್ಟೆ ಬಿ.ಸಿ.ಸಿ ಹಾಲ್ ನಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಾನು ಯಾವ ಕ್ಷೇತ್ರ ಕ್ಕೂ ಹೋದರೂ ನನ್ನ ಕ್ಷೇತ್ರದಲ್ಲಿ ಯುಟಿ ಖಾದರ್ ಆಗಿ ಕೆಲಸ ಮಾಡುತ್ತೇನೆ. ಸಭಾಧ್ಯಕ್ಷ ಆದರೂ ಕ್ಷೇತ್ರ ಮರೆತು ಬಿಡುವುದಿಲ್ಲ ಎಂದು ಭರವಸೆ ನೀಡಿದರು. ಧಾರ್ಮಿಕ, ಲೌಕಿಕ ಶಿಕ್ಷಣಕ್ಕೆ ಒತ್ತು ಕೊಟ್ಟು ಎಸ್ ಕೆ ಎಸ್ ಎಸ್ ಎಫ್ ಇಂದು ಸಮಾಜಮುಖಿಯಾಗಿ ಕೆಲಸಮಾಡುತ್ತಿದೆ ಎಂದರು.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಉಸ್ಮಾನ್ ಫೈಝಿ ರವರ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಯ್ಯಿದ್ ಅಮೀರ್ ತಂಙಳ್, ಇರ್ಷಾದ್ ದಾರಿಮಿ ಮಿತ್ತಬೈಲ್, ಅನೀಸ್ ಕೌಸರಿ, ಇಸ್ಹಾಖ್ ಫೈಝಿ ದೇರಳಕಟ್ಟೆ, ಅಬೂಬಕ್ಕರ್ ರಿಯಾಝ್ ರಹ್ಮಾನಿ, ಕಾಂಗ್ರೆಸ್ ಮುಖಂಡರಾದ ಎನ್ ಎಸ್ .ನಾಸೀರ್ ನಡುಪದವು, ಮುಹಮ್ಮದ್ ಮೋನು ಮೊದಲಾದವರು ಉಪಸ್ಥಿತರಿದ್ದರು.