ಟರ್ಕಿ ಅಧ್ಯಕ್ಷ ಎರ್ದೋಗಾನ್ ಪದಗ್ರಹಣ

ಅಂಕಾರ, ಜೂ.4: ಟರ್ಕಿ ಅಧ್ಯಕ್ಷರಾಗಿ ರಿಸೆಪ್ ತಯಿಪ್ ಎರ್ದೋಗನ್ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದು ಮೂರನೇ ಅವಧಿಗೆ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ.
ಪ್ರಧಾನಿಯಾಗಿ 3 ಅವಧಿಗೆ ಕಾರ್ಯನಿರ್ವಹಿಸಿದ್ದ 69 ವರ್ಷದ ಎರ್ದೋಗನ್, ಬಳಿಕ ಎರಡು ಬಾರಿ ಅಧ್ಯಕ್ಷರಾಗಿದ್ದರು. ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಎರ್ದೋಗನ್ ಮೂರನೇ ಬಾರಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದು ಈ ಸಮಾರಂಭದಲ್ಲಿ ನೇಟೊ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟಾಲ್ಟನ್ಬರ್ಗ್, ಸ್ವೀಡನ್ನ ಮಾಜಿ ಪ್ರಧಾನಿ ಕಾರ್ಲ್ ಬಿಲ್ಡ್ ಸೇರಿದಂತೆ ಹಲವು ವಿದೇಶಿ ಗಣ್ಯರು ಪಾಲ್ಗೊಂಡಿದ್ದರು.
Next Story