Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ದುರಂತ: 13...

ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ದುರಂತ: 13 ವರ್ಷಗಳಿಂದ ಮರಣ ಪ್ರಮಾಣಪತ್ರಕ್ಕೆ ಅಲೆದಾಟ!

5 Jun 2023 2:48 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ದುರಂತ: 13 ವರ್ಷಗಳಿಂದ ಮರಣ ಪ್ರಮಾಣಪತ್ರಕ್ಕೆ ಅಲೆದಾಟ!

ಕೊಲ್ಕತ್ತಾ: 2010ರ ಮೇ 28ರಂದು ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲು ಏರಿದ ತಂದೆ ಪ್ರಸೇನ್‌ಜೀತ್ ಅವರನ್ನು ಹೌರಾದ ಐದು ವರ್ಷದ ಪುಟ್ಟ ಬಾಲಕಿ ಪೌಲೋಮಿ ಅತ್ತಾ ಸಂತಸದಿಂದಲೇ ಬೀಳ್ಕೊಟ್ಟಿದ್ದಳು. ತನಗಾರಿ ಆಟಿಕೆ, ತಿಂಡಿ ತಿನಸುಗಳೊಂದಿಗೆ ತಂದೆ ವಾಪಸ್ಸಾಗುತ್ತಾರೆ ಎಂ ಕನಸು ಕಾಣುತ್ತಿದ್ದಳು.

ಆದರೆ ಬಂಗಾಳದ ಝಾರ್‌ಗ್ರಾಮ್ ಬಳಿ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ಪ್ರಸೇನ್‌ಜೀತ್ ಸೇರಿದಂತೆ 148 ಮಂದಿ ಮೃತಪಟ್ಟರು. ಆದರೆ ಅಧಿಕಾರಿಗಳ ಪ್ರಕಾರ, ಪ್ರಸೇನ್‌ಜೀತ್ ಇನ್ನೂ ನಾಪತ್ತೆಯಾಗಿದ್ದಾರೆಯೇ ವಿನಃ ಮೃತಪಟ್ಟಿಲ್ಲ. 13 ವರ್ಷ ಕಳೆದರೂ ಅವರ ಕುಟುಂಬಕ್ಕೆ ಇನ್ನೂ ಪ್ರಸೇನ್‌ಜೀತ್ ಅವರ ಮರಣ ಪ್ರಮಾಣಪತ್ರ ಸಿಕ್ಕಿಲ್ಲ.

ಕುಟುಂಬಕ್ಕೆ ಆರಂಭಿಕ ಹಂತದ ಪರಿಹಾರವನ್ನೂ ನೀಡಲಾಗಿತ್ತು. ಆದರೆ ಪ್ರಸೇನ್‌ಜೀತ್ ನಾಪತ್ತೆಯಾಗಿದ್ದಾರೆ ಎಂದೇ ದಾಖಲೆ ಸೃಷ್ಟಿಸಿರುವುದರಿಂದ ಮರಣ ಪ್ರಮಾಣಪತ್ರಕ್ಕಾಗಿ ಪೌಲೋಮಿ ತಾಯಿ ಜ್ಯುತಿಕಾ ಅಲೆದಾಡುತ್ತಿದ್ದಾರೆ. ಈ ಪ್ರಮಾಣಪತ್ರ ಇಲ್ಲದೇ ಕುಟುಂಬ ಪರಿಹಾರ ಮತ್ತು ಇತರ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ. ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವ ಭರವಸೆಯನ್ನು ರೈಲ್ವೆ ಇಲಾಖೆ ನ್ಯಾಯಮಂಡಳಿಯಲ್ಲಿ ನೀಡಿತ್ತು.

"ಸಿಎಂ ಮಮತಾ ಬ್ಯಾನರ್ಜಿ, ಬಳಿಕ ರೈಲ್ವೆ ಸಚಿವರು, ಸ್ಥಳೀಯ ಶಾಸಕರು, ಜಿಲ್ಲಾ ಅಧಿಕಾರಿಗಳು ಹೀಗೆ ಎಲ್ಲ ಹಂತದಲ್ಲೂ ಸಂಬಂಧಪಟ್ಟವರನ್ನು ತಾಯಿ ಭೇಟಿ ಮಾಡಿದ್ದಾರೆ. ಅಂತಿಮವಾಗಿ ಝಾರಗ್ರಾಮದ ಸಿವಿಲ್ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ ತಂದೆಯನ್ನು ಕಳೆದುಕೊಂಡು ಬೀದಿಗೆ ಬೀಳುವ ಸ್ಥಿತಿಯಲ್ಲಿದ್ದೇವೆ. ಕಳೆದ ವರ್ಷ ತಾಯಿಯೂ ಮೃತಪಟ್ಟಿದ್ದಾರೆ. ತಾಯಿಯ ಹೋರಾಟವನ್ನು ನಾನು ಮುಂದುವರಿಸಬೇಕು" ಎಂದು ಪೌಲೋಮಿ ಹೇಳುತ್ತಾರೆ.

ಅಂತೆಯೇ ಕೊಲ್ಕತ್ತಾದ ಸುರೇಂದ್ರ ಸಿಂಗ್ ಹಾಗ ಲಿಲೂವಾದ ರಾಜೇಶ್ ಕುಮಾರ್ ಭೋತ್ರಾ 2018ರಲ್ಲಿ ನ್ಯಾಯಾಲಯದ ಕಟ್ಟೆ ಏರಿದ್ದಾರೆ. ಇಬ್ಬರ ಪತ್ನಿಯರು ಹಾಗೂ ಮಕ್ಕಳು ದುರಂತದಲ್ಲಿ ಮಡಿದಿದ್ದರು. 2002ರಲ್ಲಿ ನಡೆದ ವಿಚಾರಣೆಯ ವೇಳೆ ರೈಲ್ವೆ, ಇಂಥ ದಾವೆಯ ಅಗತ್ಯತೆಯನ್ನು ಪ್ರಶ್ನಿಸಿತ್ತು. ಸರ್ಕಾರ ಇನ್ನೂ ಪ್ರಕರಣದಲ್ಲಿ ಹಾಜರಾಗಿಲ್ಲ.

"ಎರಡು ಮೂರು ಬಾರಿ ಡಿಎನ್‌ಎ ಹೊಂದಿಕೆಯಾಗುತ್ತದೆಯೇ ಎಂದು ನೋಡಲು ನನ್ನ ಕಕ್ಷಿದಾರರ ರಕ್ತ ಪರೀಕ್ಷೆಯನ್ನು ಎರಡು ಮೂರು ಬಾರಿ ಮಾಡಲಾಗಿದೆ. ಇಷ್ಟಾಗಿಯೂ ಗುರುತು ಪತ್ತೆಯಾಗದ 37 ಮೃತದೇಹಳ ಪೈಕಿ 24 ಇನ್ನೂ ಅದೇ ವರ್ಗದಲ್ಲಿ ಇದೆ. ಇದೀಗ ಮತ್ತೊಂದು ಭಯಾನಕ ರೈಲು ದುರಂತ ಸಂಭವಿಸಿದರೂ, ಯಾವ ಸಚಿವರಾಗಲೀ, ಅಧಿಕಾರಿಗಳಾಗಲೀ ಈ ಕುಟುಂಬಗಳ ನೆರವಿಗೆ ಬಂದಿಲ್ಲ" ಎಂದು ಜ್ಞಾನೇಶ್ವರಿ ದುರಂತದ ನಾಲ್ವರು ಸಂತ್ರಸ್ತ ಕುಟುಂಬಗಳ ವಕೀಲರಾಗಿರುವ ತೀರ್ಥಂಕರ ಭಕತ್ ಹೇಳಿದ್ದಾರೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X