ರಾಚೇನಹಳ್ಳಿಯಲ್ಲಿ ಪರಿಸರ ದಿನ ಆಚರಣೆ; ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಕೃಷ್ಣ ಭೈರೇಗೌಡ ಭಾಗಿ

ಬೆಂಗಳೂರು: ಬ್ಯಾಟರಾಯನಪುರ ಬಳಿಯ ರಾಚೇನಹಳ್ಳಿ ಕೆರೆಯ ಬಳಿ ವಿಶ್ವ ಪರಿಸರ ದಿನ ಕಾರ್ಯಕ್ರಮ ಆಚರಿಸಲಾಗಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಕೃಷ್ಣ ಭೈರೇಗೌಡ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿ ಹಲವರು ಭಾಗಿಯಾಗಿದ್ದರು. ಡಿಸಿಎಂ ಡಿಕೆಶಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಕಿರುನಾಟಕ ಪ್ರದರ್ಶನ ಮಾಡಿದರು.
ಇಂದು ಒಂದು ಒಳ್ಳೆಯ ಕೆಲಸದ ಮೂಲಕ ದಿನವನ್ನು ಆರಂಭಿಸಿದೆ. ಬ್ಯಾಟರಾಯನಪುರ ಬಳಿಯ ರಾಚೇನಹಳ್ಳಿಯಲ್ಲಿ ಇಂದು ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಿಡ ನೆಡುವ ಮೂಲಕ ಚಾಲನೆ ನೀಡಿದೆ. pic.twitter.com/rgsRrM0mRL
— DK Shivakumar (@DKShivakumar) June 5, 2023



Next Story