ಫೋನ್ ಚಾರ್ಜ್ ಮಾಡುವಾಗ ವಿದ್ಯುತ್ ಸ್ಪರ್ಶ: 12 ವರ್ಷದ ಬಾಲಕಿ ಮೃತ್ಯು

ಬಲ್ಲಿಯಾ(ಉತ್ತರ ಪ್ರದೇಶ): 12 ವರ್ಷದ ಬಾಲಕಿಯೊಬ್ಬಳು ತನ್ನ ಮೊಬೈಲ್ ಫೋನ್ ಚಾರ್ಜ್ ಮಾಡುವಾಗ ಲೈವ್ ವೈರ್ ಸಂಪರ್ಕಕ್ಕೆ ಬಂದ ಕಾರಣ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಉತ್ತರಪ್ರದೇಶದ ಬಲ್ಲಿಯಾದಲ್ಲಿರುವ ಸೈದ್‌ಪುರ ಗ್ರಾಮದ ನಿವಾಸಿ ಮಾನ್ಸಿ ಅವರು ವಿದ್ಯುತ್ ಆಘಾತದಿಂದ ಸುಟ್ಟಗಾಯಗಳಿಗೆ ಒಳಗಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ರವಿವಾರ ನಿಧನರಾದರು ಎಂದು ಪೊಲೀಸರು ತಿಳಿಸಿದ್ದಾರೆ.
Next Story