ಫಾದರ್ ವಲೇರಿಯನ್ ರೋಡ್ರಿಗಸ್ ನಿಧನ

ಮಂಗಳೂರು: ಹಿರಿಯ ಧರ್ಮಗುರುವಾಗಿದ್ದ ವಂ.ಫಾದರ್ ವಲೇರಿಯನ್ ರೋಡ್ರಿಗಸ್ (75) ಅವರು ರವಿವಾರ ರಾತ್ರಿ ನಿಧನರಾದರು.
ಬಜ್ಪೆಯ ಪೀಟರ್ ರೋಡ್ರಿಗಸ್ ಮತ್ತು ಫ್ಲೋರಿನ್ ಪಿಂಟೋ ದಂಪತಿ ಪುತ್ರರಾಗಿ ಡಿ.14, 1944ರಲ್ಲಿ ಜನಿಸಿದ್ದ ವಲೇರಿಯನ್ ರೋಡ್ರಿಗಸ್ ಮೇ 11, 1973 ರಂದು ಧರ್ಮಗುರುವಾಗಿ ದೀಕ್ಷೆಯನ್ನು ಪಡೆದಿದ್ದರು.
ಶಿರ್ವ ಮತ್ತು ಪೆರ್ಮನ್ನೂರು ಚರ್ಚ್‌ಗಳಲ್ಲಿ ಸಹಾಯಕ ಧರ್ಮಗುರುವಾಗಿ ಸೇವೆ ಸಲ್ಲಿಸಿದ್ದ ಅವರು ಬೆಳ್ಳೂರು, ಬೇಳ, ಮರಿಯಾಶ್ರಮ, ಬದ್ಯಾರ್, ಪಲಿಮಾರು ಮತ್ತು ಪೆರ್ಮುದೆ ಚರ್ಚ್‌ಗಳಲ್ಲಿ ಚರ್ಚ್‌ಗಳಲ್ಲಿ ಧರ್ಮಗುರುವಾಗಿ ಸೇವೆ ಸಲ್ಲಿಸಿದ್ದಾರೆ.
ಫಾದರ್ ವಲೇರಿಯನ್ 2016ರಲ್ಲಿ ನಿವೃತ್ತಿಯ ಬಳಿಕ ಜೆಪ್ಪುವಿನ ಸೈಂಟ್ ಜುಝೆ ವಾಝ್ ಹೋಮ್‌ನಲ್ಲಿ ನೆಲೆಸಿದ್ದರು. ಫಾದರ್ ವಲೇರಿಯನ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯ ಜೂನ್ 6 ರಂದು ಬೆಳಗ್ಗೆ 10 ಗಂಟೆಗೆ ವೆಲೆನ್ಸಿಯಾದ ಸೈಂಟ್ ವಿನ್ಸೆಂಟ್ ಫೆರರ್ ಚರ್ಚ್‌ನಲ್ಲಿ ನಡೆಯಲಿದೆ.
Next Story