ಮೆಸೆಂಜರ್ ಮೂಲಕ ವಂಚನೆ; ಪ್ರಕರಣ ದಾಖಲು

ಮಂಗಳೂರು, ಜೂ.5: ನಕಲಿ ಫೇಸ್‌ಬುಕ್ ಖಾತೆಯಿಂದ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಿ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾನು ಈ ಹಿಂದೆ ಕೆಲಸ ಮಾಡಿಕೊಂಡಿದ್ದ ಶಾಲೆಯ ಪ್ರಾಂಶುಪಾಲರ ಹೆಸರಿರುವ ನಕಲಿ ಫೇಸ್‌ಬುಕ್ ಖಾತೆ ಯಿಂದ ಯಾರೋ ಅಪರಿಚಿತ ವ್ಯಕ್ತಿ ಮೆಸೆಂಜರ್ ಮೂಲಕ ‘ಸ್ನೇಹಿತನ ಮಗ ತುರ್ತು ನಿಗಾ ಘಟಕದಲ್ಲಿದ್ದು 1 ಲ.ರೂ. ಅಗತ್ಯವಿದೆ’ ಎಂದು ಸಂದೇಶ ಕಳುಹಿಸಿದ್ದ. ಇದನ್ನು ನಂಬಿದ ತಾನು ಅಪರಿಚಿತ ವ್ಯಕ್ತಿ ಕಳುಹಿಸಿದ್ದ ಗೂಗಲ್ ಪೇ ಸಂಖ್ಯೆಗೆ ಹಂತ ಹಂತವಾಗಿ 80,000 ರೂ. ಕಳುಹಿಸಿದೆ. ಬಳಿಕ ಇದೊಂದು ನಕಲಿ ಫೇಸ್‌ಬುಕ್ ಖಾತೆ ಮೂಲಕ ನಡೆದಿರುವ ವಂಚನೆ ಎಂಬುದಾಗಿ ಗೊತ್ತಾಗಿದೆ ಎಂದು ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.
Next Story