Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮೋದಿ ಹಿಂಭಾಗವನ್ನು ತೋರಿಸುವ ಕನ್ನಡಿ...

ಮೋದಿ ಹಿಂಭಾಗವನ್ನು ತೋರಿಸುವ ಕನ್ನಡಿ ನೋಡುತ್ತಾ ಭಾರತದ ಕಾರನ್ನು ಚಲಾಯಿಸುತ್ತಿದ್ದಾರೆ: ರಾಹುಲ್ ಗಾಂಧಿ

5 Jun 2023 9:38 PM IST
share
ಮೋದಿ ಹಿಂಭಾಗವನ್ನು ತೋರಿಸುವ ಕನ್ನಡಿ ನೋಡುತ್ತಾ ಭಾರತದ ಕಾರನ್ನು ಚಲಾಯಿಸುತ್ತಿದ್ದಾರೆ: ರಾಹುಲ್ ಗಾಂಧಿ

ನ್ಯೂಯಾರ್ಕ್: ಭಾರತೀಯ ಜನತಾ ಪಕ್ಷ (BJP) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಭವಿಷ್ಯದತ್ತ ನೋಡಲು ಅಸಮರ್ಥವಾಗಿವೆ ಮತ್ತು ಪ್ರಧಾನಿ ನರೇಂದ್ರ ಮೋದಿ ಹಿಂಭಾಗವನ್ನು ತೋರಿಸುವ ಕನ್ನಡಿಯನ್ನು ನೋಡುತ್ತಾ ಭಾರತದ ಕಾರನ್ನು ಚಲಾಯಿಸಲು ಪ್ರಯತ್ನಿಸುತ್ತಿದ್ದಾರೆ; ಇದರಿಂದಾಗಿ ‘‘ಒಂದರ ನಂತರ ಒಂದರಂತೆ’’ ಅಪಘಾತಗಳು ನಡೆಯುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಭಾರತೀಯ ಕಾಂಗ್ರೆಸ್ ನ ವಿದೇಶಿ ಘಟಕ- ಯುಎಸ್ಎ ರವಿವಾರ ನ್ಯೂಯಾರ್ಕ್ ನ ಜವಿಟ್ಸ್ ಸೆಂಟರ್ ನಲ್ಲಿ ಏರ್ಪಡಿಸಿದ ಬೃಹತ್ ಸಮುದಾಯ ಸಮಾವೇಶವನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡುತ್ತಿದ್ದರು.

‘‘ನಮ್ಮ ದೇಶದಲ್ಲಿ ಒಂದು ಸಮಸ್ಯೆಯಿದೆ. ಆ ಸಮಸ್ಯೆ ಏನೆಂದು ನಾನು ನಿಮಗೆ ಹೇಳುತ್ತೇನೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗಳು ಭವಿಷ್ಯದತ್ತ ನೋಡಲು ಅಸಮರ್ಥವಾಗಿವೆ. ಅವುಗಳಿಗೆ ಆ ಸಾಮರ್ಥ್ಯವಿಲ್ಲ. ಅವರಲ್ಲಿ ನೀವು ಏನೇ ಕೇಳಿ, ಅವರು ಹಿಂದಿನದನ್ನು ನಿಮಗೆ ಹೇಳುತ್ತಾರೆ’’ ಎಂದು ಕಾಂಗ್ರೆಸ್ ನಾಯಕ ಹೇಳಿದರು.

ರೈಲು ಅಪಘಾತ ಯಾಕೆ ಸಂಭವಿಸಿತು ಎಂದು ನೀವು ಬಿಜೆಪಿಯನ್ನು ಕೇಳಿದರೆ, 50 ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷವು ಹೀಗೆ ಹೀಗೆ ಮಾಡಿತ್ತು ಎಂದು ಅವರು ಹೇಳುತ್ತಾರೆ ಎಂದು ಒಡಿಶಾದಲ್ಲಿ ನಡೆದ ಭೀಕರ ರೈಲು ಅಪಘಾತವನ್ನು ಉಲ್ಲೇಖಿಸುತ್ತಾ ಅವರು ಹೇಳಿದರು. ಶುಕ್ರವಾರ ನಡೆದ ರೈಲು ಅಪಘಾತದಲ್ಲಿ ಕನಿಷ್ಠ 275 ಮಂದಿ ಮೃತಪಟ್ಟಿದ್ದಾರೆ.

ಮಕ್ಕಳ ರಸಾಯನ ಶಾಸ್ತ್ರ ಪಠ್ಯಪುಸ್ತಕಗಳಿಂದ ಪೀರಿಯಾಡಿಕ್ ಟೇಬಲನ್ನು ಯಾಕೆ ತೆಗೆದಿರಿ ಎಂದು ನೀವು ಬಿಜೆಪಿಯನ್ನು ಕೇಳಿದರೆ, ಅವರು 60 ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ಏನು ಮಾಡಿತು ಎಂದ ಹೇಳುತ್ತಾರೆ ಎಂದರು.

‘‘ಅವರ ತಕ್ಷಣದ ಪ್ರತಿಕ್ರಿಯೆ ಹಿಂದೆ ನೋಡುವುದು. ನೀವು ಕೇವಲ ಹಿಂಭಾಗವನ್ನು ತೋರಿಸುವ ಕನ್ನಡಿಯನ್ನು ಮಾತ್ರ ನೋಡುತ್ತಾ ಕಾರು ಚಲಾಯಿಸಲು ಸಾಧ್ಯವಿಲ್ಲ. ಅದು ಸರಣಿ ಅಪಘಾತಗಳಿಗೆ ಕಾರಣವಾಗುತ್ತದೆ. ಇದು ನರೇಂದ್ರ ಮೋದೀಜಿಯ ವಿಷಯ. ಕಾರು ಯಾಕೆ ಅಪಘಾತಕ್ಕೆ ಒಳಗಾಗುತ್ತಿದೆ, ಯಾಕೆ ಮುಂದಕ್ಕೆ ಹೋಗುತ್ತಿಲ್ಲ ಎನ್ನುವುದೂ ಅವರಿಗೆ ಅರ್ಥವಾಗುವುದಿಲ್ಲ’’ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.

‘‘ನೀವು ಪ್ರಧಾನಿ ಮಾತನಾಡುವುದನ್ನು ಕೇಳಿ. ಅವರ ಸಚಿವರು ಮಾತನಾಡುವುದನ್ನು ಕೇಳಿ. ಅವರು ಭವಿಷ್ಯದ ಬಗ್ಗೆ ಮಾತನಾಡುವುದು ನಿಮಗೆ ಕಾಣುವುದಿಲ್ಲ. ಅವರು ಯಾವಾಗಲೂ ಗತ ಕಾಲದ ವಿಷಯಗಳನ್ನೇ ಮಾತನಾಡುತ್ತಾರೆ ಮತ್ತು ಯಾರನ್ನಾದರೂ ದೂಷಿಸುತ್ತಾ ಇರುತ್ತಾರೆ’’ ಎಂದರು.

ಗಾಂಧಿ-ಗೋಡ್ಸೆ ಸಿದ್ಧಾಂತಗಳ ನಡುವಿನ ಸಮರ

ಭಾರತದಲ್ಲಿ ಈಗ ನಡೆಯುತ್ತಿರುವುದು ಮಹಾತ್ಮಾ ಗಾಂಧಿ ಮತ್ತು ಅವರನ್ನು ಕೊಂದ ನಾಥೂರಾಮ್ ಗೋಡ್ಸೆಯ ಸಿದ್ಧಾಂತಗಳ ನಡುವಿನ ಸಂಘರ್ಷ ಎಂದು ರಾಹುಲ್ ಗಾಂಧಿ ಹೇಳಿದರು.

‘‘ಭಾರತದಲ್ಲಿ ಎರಡು ಸಿದ್ಧಾಂತಗಳ ನಡುವಿನ ಸಂಘರ್ಷ ನಡೆಯುತ್ತಿದೆ. ಒಂದು ನಾವು ಅನುಸರಿಸುವ ಸಿದ್ಧಾಂತ ಮತ್ತು ಇನ್ನೊಂದು ಬಿಜೆಪಿ ಮತ್ತು ಆರ್ಎಸ್ಎಸ್ ಅನುಸರಿಸುವ ಸಿದ್ಧಾಂತ. ಈ ಹೋರಾಟವನ್ನು ಸರಳವಾಗಿ ವಿವರಿಸಬೇಕೆಂದರೆ, ಒಂದು ಬದಿಯಲ್ಲಿ ಮಹಾತ್ಮಾ ಗಾಂಧಿ ಇದ್ದಾರೆ ಮತ್ತು ಇನ್ನೊಂದು ಬದಿಯಲ್ಲಿ ಇರುವುದು ಮಹಾತ್ಮಾ ಗಾಂಧಿಯನ್ನು ಕೊಂದ ನಾಥುರಾಮ್ ಗೋಡ್ಸೆ’’ ಎಂದು ರಾಹುಲ್ ಗಾಂಧಿ ನುಡಿದರು.

ಮಹಾತ್ಮಾ ಗಾಂಧಿ ಬಗ್ಗೆ ಮಾತನಾಡಿದ ಅವರು, ‘‘ಒಂದು ಬದಿಯಲ್ಲಿ ಇರುವುದು ‘‘ಧೀರ ವ್ಯಕ್ತಿ’’, ನಿಮ್ಮಂಥ ಎನ್‌ಆರ್‌ಐ - ಬಹುಷಃ ಭಾರತದ ಅತ್ಯಂತ ಪ್ರಭಾವಶಾಲಿ ಎನ್‌ಆರ್‌ಐ. ಅತ್ಯಂತ ವಿನೀತ, ಸರಳ ವ್ಯಕ್ತಿ. ಆದರೆ ಭವಿಷ್ಯದಲ್ಲಿ ಭರವಸೆ ಹೊಂದಿದ್ದ, ಭಾರತದಲ್ಲಿ ಭರವಸೆ ಹೊಂದಿದ್ದ, ಅಹಿಂಸೆಯನ್ನು ಪ್ರತಿಪಾದಿಸಿದ ಮತ್ತು ಸತ್ಯದ ಶೋಧ ನಡೆಸಿದ ವ್ಯಕ್ತಿ. ಇದೇ ಸಿದ್ಧಾಂತವನ್ನು ನಾವು ಅನುಸರಿಸುತ್ತಿರುವುದು. ಅದುವೇ ಈ ಕೋಣೆಯಲ್ಲಿರುವ ನೀವೆಲ್ಲರೂ ಅನುಸರಿಸುವ ಸಿದ್ಧಾಂತ’’ ಎಂದು ಹೇಳಿದರು.

‘‘ಇನ್ನೊಂದು ಬದಿಯಲ್ಲಿ ಇರುವುದು ನಾಥುರಾಮ್ ಗೋಡ್ಸೆ. ಹಿಂಸಾವಾದಿ ಮತ್ತು ಕೋಪದ ಮನೋಭಾವದ ವ್ಯಕ್ತಿ. ತನ್ನದೇ ಜೀವನದ ವಾಸ್ತವವನ್ನು ಎದುರಿಸಲಾಗದ ವ್ಯಕ್ತಿ. ತನ್ನ ಸ್ವಂತ ಜೀವನವನ್ನು ಎದುರಿಸಲಾಗದ ಕಾರಣಕ್ಕೆ ಅವನು ಗಾಂಧೀಜಿಯನ್ನು ಕೊಂದ. ಅವನು ಯಾರ ಮೇಲಾದರೂ ತನ್ನ ಕೋಪವನ್ನು ಹೊರಗೆಡವಬೇಕಾಗಿತ್ತು. ಅದಕ್ಕಾಗಿ ಅವನು ಭಾರತದ ಆತ್ಮವನ್ನು ಪ್ರತಿನಿಧಿಸುವ ವ್ಯಕ್ತಿಯ ಮೇಲೆ ತನ್ನ ಕೋಪವನ್ನು ಹೊರಗೆಡವಿದ’’ ಎಂದು ಮಾಜಿ ಸಂಸದನೂ ಆಗಿರುವ ರಾಹುಲ್ ಗಾಂಧಿ ಹೇಳಿದರು.

‘‘ಗಾಂಧೀಜಿ ಮುಕ್ತ ಮನೋಭಾವದ ಆಧುನಿಕ ವ್ಯಕ್ತಿಯಾಗಿದ್ದರೆ, ಗೋಡ್ಸೆ ಕೇವಲ ಹಿಂದಿನದನ್ನು ಮಾತನಾಡುತ್ತಿದ್ದನು’’ ಎಂದರು.

share
Next Story
X