‘ಮಹಾಭಾರತ’ ಖ್ಯಾತಿಯ ನಟ ಗುಫಿ ಪೈಂಟಲ್ ನಿಧನ

ಮುಂಬೈ: ಬಿ.ಆರ್.ಚೋಪ್ರಾ ಅವರ ‘ಮಹಾಭಾರತ ’ ಟಿವಿ ಧಾರಾವಾಹಿಯಲ್ಲಿ ‘ಶಕುನಿ ಮಾಮಾ’ ಪಾತ್ರವನ್ನು ನಿರ್ವಹಿಸುವ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದ ನಟ ಗುಫಿ ಪೈಂಟಲ್ (79) ಅವರು ಸೋಮವಾರ ವಯೋಸಹಜ ಅನಾರೋಗ್ಯದಿಂದ ಇಲ್ಲಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಪುತ್ರ,ಸೊಸೆ ಮತ್ತು ಮೊಮ್ಮಗುವನ್ನು ಅಗಲಿದ್ದಾರೆ.
ಸರ್ವಜಿತ್ ಸಿಂಗ್ ಪೈಂಟಲ್ ನಿಜ ನಾಮಧೇಯದ ಅವರನ್ನು ಉಪನಗರ ಅಂಧೇರಿಯಲ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಬೆಳಿಗ್ಗೆ ನಿದ್ರೆಯಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ.
ಗುಫಿ ಪೈಂಟಲ್ ಸುಹಾಗ್ ಮತ್ತು ದಿಲ್ಲಗಿಯಂತಹ ಬಾಲಿವುಡ್ ಚಿತ್ರಗಳಲ್ಲಿ ಮತ್ತು ಸಿಐಡಿ,ಹಲೋ ಇನ್ಸ್ಪೆಕ್ಟರ್ನಂತಹ ಟಿವಿ ಧಾರಾವಾಹಿಗಳಲ್ಲಿಯೂ ನಟಿಸಿದ್ದರು.
ಅವರ ಕಿರಿಯ ಸೋದರ ಪೈಂಟಲ್(ಕನ್ವರ್ಜಿತ್ ಪೈಂಟಲ್) ಕೂಡ ಖ್ಯಾತ ನಟರಾಗಿದ್ದಾರೆ.
ಗುಫಿ ಪೈಂಟಲ್ ಅವರ ಅಂತ್ಯಸಂಸ್ಕಾರವು ಸಂಜೆ ಅಂಧೇರಿ ಚಿತಾಗಾರದಲ್ಲಿ ನೆರವೇರಿತು.
Next Story