ಅಮೃತಸರ: ಪಾಕಿಸ್ತಾನಿ ಡ್ರೋನ್ ಹೊಡೆದುರುಳಿದ ಬಿಎಸ್ಎಫ್

ಚಂಡಿಗಡ,: ಪಂಜಾಬಿನ ಅಮೃತಸರದಲ್ಲಿ ಅಂತರರಾಷ್ಟ್ರೀಯ ಗಡಿ ಸಮೀಪ ರವಿವಾರ ರಾತ್ರಿ ಪಾಕಿಸ್ತಾನಿ ಡ್ರೋನ್ವೊಂದನ್ನು ಹೊಡೆದುರುಳಿಸಿರುವ ಗಡಿ ರಕ್ಷಣಾ ಪಡೆ (BSF)ಯು ಅದರಲ್ಲಿದ್ದ ಮೂರು ಕೆ.ಜಿ.ಗೂ ಅಧಿಕ ಹೆರಾಯಿನ್ನ್ನು ವಶಪಡಿಸಿಕೊಂಡಿದೆ ಎಂದು ಬಿಎಸ್ಎಫ್ ವಕ್ತಾರರು ಸೋಮವಾರ ತಿಳಿಸಿದರು.
ಶೋಧ ಕಾರ್ಯಾಚರಣೆಯ ವೇಳೆ ಅಮೃತಸರದ ರತನ್ಖುರ್ದ್ ಗ್ರಾಮದ ಹೊಲವೊಂದರಲ್ಲಿ ಪತನಗೊಂಡ ಡ್ರೋನ್ ಪತ್ತೆಯಾಗಿದ್ದು,ಅದರಲ್ಲಿ ಹೆರಾಯಿನ್ನ ಮೂರು ಪ್ಯಾಕೆಟ್ಗಳಿದ್ದವು ಎಂದರು.
Next Story