ದೇವದುರ್ಗ ಶಾಸಕಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ; ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ರಾಯಚೂರು: ದೇವದುರ್ಗ ಶಾಸಕಿ ಕರೇಮ್ಮ ಜಿ. ನಾಯಕ್ ಅವರಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ ಆರೋಪದಡಿ ಮಾಜಿ ಶಾಸಕ ಕೆ. ಶಿವನಗೌಡ ನಾಯಕ್ ಅವರ ಸಹೋದರ ಸೇರಿ 8 ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಆಲದಮರ ತಾಂಡದಲ್ಲಿ ರವಿವಾರ ಲೈನ್ ಮನ್ ವಿರೂಪಾಕ್ಷ ಮೃತಪಟ್ಟ ಸ್ಥಳಕ್ಕೆ ಶಾಸಕಿ ಕರೇಮ್ಮ ಜಿ ನಾಯಕ ಅವರು ಭೇಟಿ ನೀಡಿದ್ದರು. ಈ ವೇಲೆ ಶಾಸಕಿಗೆ ಬಿಜೆಪಿಯ ಮುಖಂಡರು ಅವಾಚ್ಯ ಪದಗಳಿಂದ ನಿಂದಿಸಿದ್ದರು ಎಂದು ಹೇಳಲಾಗಿದೆ.
ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಬಿಜೆಪಿ ಮುಖಂಡರನ್ನು ಬಂಧಿಸುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು.
Next Story