Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರೈಲು ದುರಂತದಲ್ಲಿ ಮಗ ಮೃತಪಟ್ಟಿಲ್ಲ ಎಂಬ...

ರೈಲು ದುರಂತದಲ್ಲಿ ಮಗ ಮೃತಪಟ್ಟಿಲ್ಲ ಎಂಬ ದೃಢ ವಿಶ್ವಾಸದಲ್ಲಿದ್ದ ತಂದೆಗೆ ಶವಾಗಾರದಲ್ಲಿ ಜೀವಂತವಾಗಿ ಸಿಕ್ಕ ಮಗ!

ಒಡಿಶಾ ರೈಲು ದುರಂತದಲ್ಲಿ ನಡೆದ ಮನಕಲಕುವ ಘಟನೆ

6 Jun 2023 6:25 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ರೈಲು ದುರಂತದಲ್ಲಿ ಮಗ ಮೃತಪಟ್ಟಿಲ್ಲ ಎಂಬ ದೃಢ ವಿಶ್ವಾಸದಲ್ಲಿದ್ದ ತಂದೆಗೆ ಶವಾಗಾರದಲ್ಲಿ ಜೀವಂತವಾಗಿ ಸಿಕ್ಕ ಮಗ!
ಒಡಿಶಾ ರೈಲು ದುರಂತದಲ್ಲಿ ನಡೆದ ಮನಕಲಕುವ ಘಟನೆ

ಹೊಸದಿಲ್ಲಿ:  ಒಡಿಶಾ ರೈಲು ದುರಂತದಲ್ಲಿ ತನ್ನ ಮಗ ಸತ್ತಿದ್ದಾನೆಂದು ನಂಬಲು ಸಿದ್ಧನಿಲ್ಲದ ವ್ಯಕ್ತಿಯೊಬ್ಬರು ಪುತ್ರನನ್ನು ಹುಡುಕಿಕೊಂಡು 200 ಕಿ.ಮೀ.ಗೂ ಅಧಿಕ ದೂರ ಸಂಚರಿಸಿ ಕೊನೆಗೂ ಆತನನ್ನು ಶವಾಗಾರದಲ್ಲಿ ಜೀವಂತವಾಗಿ ಪತ್ತೆ ಹಚ್ಚಿದ ಘಟನೆ ವರದಿಯಾಗಿದೆ.

ಹೇಲರಾಮ್‌ ಮಲಿಕ್‌ ಎಂಬ ವ್ಯಕ್ತಿ ತನ್ನ  ಪುತ್ರ ಬಿಸ್ವಜೀತ್‌ನನ್ನು ಶಾಲಿಮಾರ್‌ ರೈಲು ನಿಲ್ದಾಣದಲ್ಲಿ ಕೊರಮಂಡಲ್‌ ಎಕ್ಸ್‌ಪ್ರೆಸ್‌ ರೈಲಿಗೆ ಹತ್ತಿಸಿ ವಾಪಸಾದ ಕೆಲವೇ ಗಂಟೆಗಳಲ್ಲಿ ರೈಲು ಅಪಘಾತದ ಕುರಿತು ಮಾಹಿತಿ ದೊರಕಿತ್ತು.

ಹೌರಾದಲ್ಲಿ ವ್ಯಾಪಾರಿಯಾಗಿರುವ ಹೇಲರಾಂ ತಕ್ಷಣ ತಮ್ಮ 24 ವರ್ಷದ ಪುತ್ರನಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ್ದ ಬಿಸ್ವಜೀತ್‌ ತೀರಾ ನಿತ್ರಾಣದ ದನಿಯಲ್ಲಿ ಮಾತನಾಡಿದ್ದ. ಆತ ಜೀವಂತವಿದ್ದ ಆದರೆ ಬಹಳಷ್ಟು ನೋವು ಅನುಭವಿಸುತ್ತಿದ್ದಾನೆ ಎಂದು ತಿಳಿದ ಹೇಲರಾಂ ತಡ ಮಾಡದೆ ಸ್ಥಳೀಯ ಆ್ಯಂಬುಲೆನ್ಸ್‌ ಚಾಲಕ ಪಾಲಶ್‌ ಪಂಡಿತ್‌ ಎಂಬಾತನನ್ನು ಸಂಪರ್ಕಿಸಿ 230 ಕಿಮೀ ದೂರದ ಅಪಘಾತ ಸಂಭವಿಸಿದ ಬಾಲಾಸೋರ್‌ ಎಂಬಲ್ಲಿಗೆ ಪ್ರಯಾಣಿಸಿದ್ದರು. ಜೊತೆಗೆ ತನ್ನ ಮೈದುನ ದೀಪಕ್‌ ದಾಸ್‌ನನ್ನೂ ಕರೆದೊಯ್ದಿದ್ದರು. ಶುಕ್ರವಾರ ರಾತ್ರಿ ತಲುಪಿದ ಅವರು ಗಾಯಾಳುಗಳು ದಾಖಲಾಗಿದ್ದ ಎಲ್ಲಾ ಆಸ್ಪತ್ರೆಗಳಲ್ಲಿ ವಿಚಾರಿಸಿದರೂ ಬಿಸ್ವಜೀತ್‌ ಕುರಿತು ಮಾಹಿತಿ ದೊರಕಿರಲಿಲ್ಲ.

ಆಸ್ಪತ್ರೆಗಳಲ್ಲಿ ಕಾಣಿಸದೇ ಇದ್ದರೆ ಮೃತದೇಹಗಳನ್ನಿರಿಸಲಾಗಿರುವ ಬಹನಗ ಹೈಸ್ಕೂಲಿಗೆ ತೆರಳಬೇಕು ಎಂದು ಯಾರೋ ತಿಳಿಸಿದಂತೆ ಅಲ್ಲಿಗೆ ತೆರಳಿದ್ದರು.

ಅಲ್ಲಿನ ತಾತ್ಕಾಲಿಕ ಶವಾಗಾರದಲ್ಲಿ ಹಲವಾರು ಜನರು ತಮ್ಮವರಿಗಾಗಿ ಹುಡುಕುತ್ತಿದ್ದರು. ಆದರೆ ಅದಾಗಲೇ ಒಂದು ಮೃತದೇಹದ ಕೈ ಅದುರುತ್ತಿದ್ದುದನ್ನು ಕಂಡು ಜನ ಬೊಬ್ಬೆ ಹಾಕಿದರು. ಹೇಲರಾಂ ಮತ್ತಿತರರು ಅಲ್ಲಿಗೆ ಧಾವಿಸಿದಾಗ ಅದು ಬೇರೆ ಯಾರೂ ಅಲ್ಲದೆ ಬಿಸ್ವಜೀತ್‌ ಆಗಿದ್ದ ಎಂದು Times of India ವರದಿ ಮಾಡಿದೆ.

ತಕ್ಷಣ ಆತನನ್ನು ಆ್ಯಂಬುಲೆನ್ಸ್‌ನಲ್ಲಿ ಹಾಕಿ ಕಟಕ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಬಾಂಡ್‌ಗೆ ಸಹಿ ಹಾಕಿ ಕೊಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆತನ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ. ಈಗಾಗಲೇ ಮೊಣಕಾಲಿಗೆ ಶಸ್ತ್ರಕ್ರಿಯೆ ನಡೆಸಲಾಗಿದ್ದು ಇನ್ನೂ ಕೆಲ ಶಸ್ತ್ರಕ್ರಿಯೆಗಳು ಬಾಕಿಯಿವೆ ಎನ್ನಲಾಗಿದೆ.

ರಕ್ಷಣಾ ಕಾರ್ಯಕರ್ತರು ಕಾರ್ಯಾಚರಣೆ ವೇಳೆ ನಿಶ್ಚಲನಾಗಿದ್ದ ಬಿಸ್ವಜೀತ್‌ ಮೃತಪಟ್ಟಿದ್ದಾನೆಂದು ಭಾವಿಸಿ ಆತನ ದೇಹವನ್ನು ಶವಾಗಾರಕ್ಕೆ ಸಾಗಿಸಿರಬೇಕೆಂದು ಅಂದಾಜಿಸಲಾಗಿದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X