ಬಸ್ ಢಿಕ್ಕಿ; ಕೋಮಾ ಸ್ಥಿತಿಗೆ ತಲುಪಿದ್ದ ವ್ಯಕ್ತಿ ಮೃತ್ಯು
ಶಿವಮೊಗ್ಗ, ಜೂ.6: ಸಿಟಿ ಬಸ್ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾರೆ.
ಕೋಮಾ ಸ್ಥಿತಿಗೆ ತಲುಪಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ 18 ದಿನಗಳ ಬಳಿಕ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಟ್ಯಾಂಕ್ ಮೊಹಲ್ಲಾ ನಿವಾಸಿ ಸಿ.ಎಸ್.ಇಕ್ಬಾಲ್ ಅಹಮದ್ (69) ಮೃತ ವ್ಯಕ್ತಿ. ಮೇ 16ರಂದು ಮಹಾವೀರ ವೃತ್ತದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಇಕ್ಬಾಲ್ ಅಹಮದ್ ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು ಎನ್ನಲಾಗಿದೆ.
Next Story